ಕುಸುಬೆಗೆ ಕ್ವಿಂಟಾಲ್ಗೆ 5940 ರೂ. ಬೆಂಬಲ ಬೆಲೆ ನಿಗದಿ

Support price fixed at Rs 5940 per quintal for safflower
ಟಿ. ಭೂಬಾಲನ್, ಜಿಲ್ಲಾಧಿಕಾರಿ
Published on

ವಿಜಯಪುರ : ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕುಸುಬೆ ಉತ್ಪನ್ನಕ್ಕೆ ಜಿಲ್ಲಾ ಕನಿಷ್ಠ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿಯು ಪ್ರತಿ ಕ್ವಿಂಟಲ್ಗೆ 5940 ರೂ. ಗಳ ಬೆಂಬಲ ಬೆಲೆ ನಿಗದಿಪಡಿಸಿದೆ ಎಂದು ಜಿಲ್ಲಾಧಿಕಾರಿ, ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಅಧ್ಯಕ್ಷರೂ ಆದ ಟಿ. ಭೂಬಾಲನ್ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 529 ಹೆಕ್ಟೇರ್ ಕ್ಷೇತ್ರದಲ್ಲಿ ಕುಸುಬೆ ಬಿತ್ತನೆಯಾಗಿದೆ. ಅದರಿಂದ 6600 ಕ್ವಿಂಟಲ್ ಇಳುವರಿ ಅಂದಾಜಿಸಲಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 5300 ರಿಂದ 5500 ರೂ. ಗಳವರೆಗಿನ ದರದಲ್ಲಿ ಮಾರಾಟವಾಗುತ್ತಿದೆ. ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಾಲ್ ಕುಸುಬೆ ಉತ್ಪನ್ನಕ್ಕೆ 5940 ರೂ. ಗಳ ಬೆಲೆ ನಿಗದಿಪಡಿಸಿ ಖರೀದಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬೆಂಬಲ ಬೆಲೆಯಡಿ ಕುಸುಬೆ ಉತ್ಪನ್ನ ಖರೀದಿಗೆ ಜಿಲ್ಲೆಯ ಕೆಒಎಫ್ ಸಂಸ್ಥೆಯ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತದವರು ರೈತರ ನೋಂದಣಿ ಕಾರ್ಯದ ಜತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ವಿಜಯಪುರ- ಬಬಲೇಶ್ವರ ತಾಲೂಕಿನ ಬಬಲೇಶ್ವರ, ಸವನಹಳ್ಳಿ ಹಾಗೂ ತಾಜಪುರ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ವಿಜಯಪುರ ತಾಲೂಕಿನ ವಿಜಯಪುರ ಟಿಎಪಿಸಿಎಂಎಸ್ ಮುದ್ದೇಬಿಹಾಳ ತಾಲೂಕಿನ ತಂಗಡಗಿ, ಇಂಡಿ-ಚಡಚಣ ತಾಲೂಕಿನ ಚಡಚಣ, ಹಲಸಂಗಿ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಸಿಂದಗಿ ತಾಲೂಕಿನ ಸಿಂದಗಿ, ಟಿಎಪಿಸಿಎಂಎಸ್ ಹಾಗೂ ಬಸವನಬಾಗೇವಾಡಿ ತಾಲೂಕಿನಲ್ಲಿ ಟಿಎಪಿಸಿಎಂ ಬಸವನಬಾಗೇವಾಡಿಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 5 ಕ್ವಿಂಟಾಲ್ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಎಫ್‌ಎಕ್ಯೂ ಗುಣಮಟ್ಟದ ಕುಸುಬೆಯನ್ನು ಖರೀದಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net