

ಚಿಂಚೋಳಿ: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಒತ್ತಾಯಿಸಿ ಕರ್ನಾಟಕ ಬಂದಗೆ ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟ ಹಾಗೂ ವಾಹನ ಮಾಲಿಕರು ಮತ್ತು ಚಾಲಕರ ಸಂಘ ಬೆಂಬಲ ವ್ಯಕ್ತಪಡಿಸಿ ಕನಕ ವೃತ್ತದಿಂದ ತಹಸೀಲ್ ಕಚೇರಿ ವರೆಗೆ ಬೃಹತ್ ಮೆರವಣಿಗೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಬಂದ್ ಬೆಂಬಲಿಸಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ದೇಶಪಾಂಡೆ ಮಾತನಾಡಿ ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದು ನಿಲ್ಲಿಸಬೇಕು. ಬೆಂಗಳೂರು, ಮಂಡ್ಯ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಉಂಟಾಗಲಿದ್ದು, ಎಚ್ಚರ ವಹಿಸಬೇಕು. ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನಾಡಿನ ಪರ ನಿಲ್ಲುವಂತೆ ಒತ್ತಾಯಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಿದರು.
ಈ ಹೋರಾಟದಲ್ಲಿ ಬಸವರಾಜ ವಾಡಿ, ವಿಠಲ ಕುಸಾಳೆ, ಉಲ್ಲಾಸಕುಮಾರ ಕೇರಳ್ಳಿ, ಶ್ರೀಕಾಂತ್ ಜಾನಕಿ, ಝರಣಪ್ಪ ತಳವಾರ, ಸುಜಾತ ರಾಜಗೀರಿ, ಶ್ರೀಕಾಂತ ರಾಠೋಡ, ಪ್ರಭು ಪೂಜಾರಿ, ಅಶ್ಫಾಕ್, ನವೀನ ಕಟ್ಟಿ, ಸುನೀಲ್ ಸೇರಿದಂತೆ ಅನೇಕರು ಇದ್ದರು.