ಪ್ರಕೃತಿ ಸಂರಕ್ಷಣೆಗೆ ಸಹಕರಿಸಿ

12 NMG 01 (3)
Published on

ನಾಗಮಂಗಲ: ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪ್ರಕೃತಿ ಸಂರಕ್ಷಣೆಗೆ ಸಹಕರಿಸಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ ಹೇಳಿದರು.

ದೇವಲಾಪುರ ಹೋಬಳಿಯ ಮದ್ದೇನಹಟ್ಟಿ ಗ್ರಾಮದಲ್ಲಿ ಶನಿವಾರ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಮಂಡ್ಯದ ಅನನ್ಯ ಟ್ರಸ್ಟ್ ಯೋಜಿಸಿದ್ದ ಹಸಿರು ಕರ್ನಾಟಕ ಕಾರ್ಯಕ್ರಮದಲ್ಲಿ ಮನೆ-ಮನೆಗೆ ಗಿಡ ವಿತರಿಸಿ ಮಾತನಾಡಿದರು.

ನಾಗಮಂಗಲ ತಾಲೂಕು ಇಂದಿಗೂ ಬರಪೀಡಿತ ತಾಲೂಕಾಗಿ ಉಳಿಯಲು ಅರಣ್ಯ ನಾಶವೇ ಕಾರಣವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಜಮೀನುಗಳಲ್ಲಿ ಗಿಡಗಳನ್ನು ಬೆಳೆಸಿದರೆ ಲಾಭದಾಯಕವೂ ಆಗುತ್ತದೆ ಎಂದರು. ಪ್ರಕೃತಿಯನ್ನು ನಾವು ಗೌರವಿಸಿದರೆ ಅದು ಸಹ ನಮ್ಮನ್ನು ಪೋಷಿಸಿ ರಕ್ಷಣೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಅನನ್ಯ ಟ್ರಸ್ಟ್ ಸಂಸ್ಥಾಪಕಿ ಅನುಪಮಾ ಮಾತನಾಡಿ ‘ಮನೆಗೊಂದು ಗಿಡ, ಊರಿಗೊಂದು ವನ’ ಅಭಿಯಾನದಡಿ ಕಳೆದ 5 ವರ್ಷಗಳಿಂದ ಟ್ರಸ್ಟ್ ಪ್ರತಿ ಗ್ರಾಪಂ ಗೊಂದು ಗ್ರಾಮ ಆಯ್ಕೆಮಾಡಿಕೊಂಡು ಗಿಡ ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದೆ. 500ಕ್ಕೂ ಹೆಚ್ಚು ಗಿಡ ವಿತರಿಸಲಾಗಿದೆ. ಸಮುದಾಯದಲ್ಲಿ ಪರಿಸರ ಕಾಳಜಿ ಹಾಗೂ ಸಂರಕ್ಷಣೆ ಜಾಗೃತಿ ಮೂಡಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಪ್ರಕೃತಿಯ ಮೇಲೆ ದೈವ ರೂಪದ ಮನೋಭಾವವಿರುವುದು ಯೋಜನೆ ಉದ್ದೇಶ ಈಡೇರಿಕೆಗೆ ಸಹಕಾರಿ ಎಂದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಶೃತಿ, ಅರಣ್ಯ ಇಲಾಖೆ ಅಧಿಕಾರಿ ಮಂಜುನಾಥ್, ವಿಶ್ವ ಕನ್ನಡ ರಕ್ಷಕ ದಳದ ಪದಾಧಿಕಾರಿಗಳು ಸೇರಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net