

ಬನ್ನೂರು: ಭವ್ಯ ಭಾರತದ ಭದ್ರತೆ ಮತ್ತು ವಿಕಸಿತ ಭಾರತಕ್ಕೆ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ನಾವೆಲ್ಲರೂ ನಮ್ಮ ಲೋಕಸಭಾ ಚುನಾವಣೆಯ ಚಾಮರಾಜನಗರ ಮೀಸಲು ಕ್ಷೇತ್ರದ ಅಭ್ಯರ್ಥಿ ಎಸ್.ಬಾಲರಾಜ್ ಅವರನ್ನು ಹೆಚ್ಚು ಮತ ಅಂತರದಿಂದ ಗೆಲ್ಲಿಸಬೇಕು ಎಂದು ಬಿಜೆಪಿ ಟೌನ್ ಶಕ್ತಿ ಕೇಂದ್ರದ ಅಧ್ಯಕ್ಷ ಪಿ.ಪ್ರಭಾಕರ್ ಮನವಿ ಮಾಡಿದರು.
ಪಟ್ಟಣದ ದೊಡ್ಡಅಂಗಡಿ ಬೀದಿಯಲ್ಲಿ ಕರಪತ್ರ ಹಂಚಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಮಾಡುತ್ತಿರುವ ಮೋಸ ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಜನರು ಈ ಬಗ್ಗೆ ನಿಗಾವಹಿಸಿ, ಭಾಗ್ಯಗಳಿಗೆ ಬೆಲೆ ಕೊಡದೆ ಎಸ್.ಬಾಲರಾಜ್ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೋದಿ ಅವರನ್ನು ಪ್ರಧಾನಿ ಮಾಡಿದರೆ ಮಾತ್ರ ದೇಶದ ಪ್ರಗತಿ ಎನ್ನುವುದನ್ನು ತಿಳಿಸಿ, ತಮ್ಮ ಇಳಿವಯಸ್ಸಿನಲ್ಲಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಟೌನ್ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಕಾಳೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಭೂತ್ ಅಧ್ಯಕ್ಷ ಸತೀಶ್, ಗಣೇಶ್, ಭವ್ಯ, ಗೋಪಿನಾಥ್, ಸ್ವಾಮಿ, ಸತೀಶ್, ಮಹೇಶ್‌ನಾಯಕ್, ಬೇಕರಿ ಸುರೇಶ್, ರವಿ, ಮಾಯಪ್ಪ(ಚಂದ್ರಶೇಖರ್), ಕಂಬು, ರವಿ(ಚಂಪು), ಸ್ವಾಮಿ, ಜ್ಯೋತಿ, ಮಾಕನಹಳ್ಳಿ ಜಯರಾಮು ಇದ್ದರು.