ಮರಿತಿಬ್ಬೆಗೌಡ ಅವರನ್ನು ಬೆಂಬಲಿಸಿ: ಪುಷ್ಪ ಅಮರ್‌ನಾಥ್

mng--19 April Pushpa Amarnath-
Published on

ಪದವೀಧರ ಶಿಕ್ಷಕರ ಕ್ಷೆತ್ರದಿಂದ ನಾಲ್ಕು ಬಾರಿ ಜಯ ಗಳಿಸಿ ಐದನೇ ಬಾರಿಗೆ ಸ್ಪರ್ಧಿಸಿರುವ ಮರಿತಿಬ್ಬೆಗೌಡ ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಪುಷ್ಪ ಅಮರ್‌ನಾಥ್ ಹೇಳಿದರು.

ಮರಿತಿಬ್ಬೆಗೌಡ ಅವರು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದಾಗಲೂ ವಿರೋಧ ಪಕ್ಷದಲ್ಲಿದ್ದರು. ಆಡಳಿತ ಪಕ್ಷ ಇಲ್ಲದಿದ್ದರೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಈ ಬಾರಿ ಅವರದೇ ಪಕ್ಷ ಅಧಿಕಾರದಲ್ಲಿದ್ದು, ಶಿಕ್ಷಕರ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರಗಳು ವಿದ್ಯಾವಂತರಿಗೆ ಉದ್ಯೊಗ ಕೊಡಲು ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ಉದ್ಯೊಗ ಕೊಡಲು ಬದ್ಧವಾಗಿದ್ದು, ಪದವೀಧರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net