

ಪರಶುರಾಮಪುರ:ಗ್ರಾಮದ ಮುಖ್ಯವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು, ನಾಡಕಚೇರಿಗೆ ತೆರಳಿ ಉಪ ತಹಸೀಲ್ದಾರ್ ಅನ್ನಪೂರ್ಣಾ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ವಿವಿಧ ಸಂಘಟನೆಗಳು, ಸ್ವ ಸಹಾಯ ಸಂಸ್ಥೆಗಳು, ಹಮಾಲರು, ವರ್ತಕರು, ಆಟೋ, ಲಘು ವಾಹನಗಳ ಮಾಲೀಕರು, ಚಾಲಕರು, ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತ ಸಂಘಗಳ ಪದಾಧಿಕಾರಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿರಲಿಲ್ಲ.
ರೈತಸಂಘದ ತಾಲೂಕಾಧ್ಯಕ್ಷ ಕೆ.ಚಿಕ್ಕಣ್ಣ, ಪದಾಧಿಕಾರಿಗಳಾದ ಹನುಮಂತಪ್ಪ, ಬಾಷಾ, ಜಂಪಣ್ಣ, ಚೌಳೂರು ಪ್ರಕಾಶ, ಗ್ರಾಮ ಘಟಕದ ಅಧ್ಯಕ್ಷ ನವೀನಗೌಡ, ಕೊಂಡ್ಲೇರ ಪರಮೇಶ್ವರಪ್ಪ, ಕೃಷ್ಣಮೂರ್ತಿ, ಈರಣ್ಣ, ಕರಿಯಣ್ಣ ಬಸವರಾಜು, ತಿಮ್ಮಯ್ಯ, ನಾಗರಾಜು ಇದ್ದರು.