ನೆಟ್‌ವರ್ಕ್ ದುರಸ್ತಿಯಿಂದ ಸಹಕಾರ

network
Published on

ಹೆಬ್ರಿ: ಆಗುಂಬೆ ತಪ್ಪಲಿನಲ್ಲಿರುವ ನೆಟ್‌ವರ್ಕ್‌ನಿಂದಾಗಿ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಪಂಗೆ ತಾಂತ್ರಿಕ ಕಾರಣಗಳಿಂದ 20 ದಿನಗಳಿಂದ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಲಭ್ಯತೆ ಇರಲಿಲ್ಲ. ವರದಿ ಪ್ರಕಟಿಸಿದ 24 ಗಂಟೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಿದ್ದಾರೆ. ನೆಟ್‌ವರ್ಕ್ ಸಮಸ್ಯೆಯಿಂದ ಪಂಚಾಯಿತಿ ವ್ಯಾಪ್ತಿಯ ಸೋಮೇಶ್ವರ, ಕೂಡ್ಲು, ಸೀತಾನದಿ, ಮೇಗದ್ದೆ, ವಣಜಾರು, ನೆಲ್ಲಿಕಟ್ಟೆಯ ಜನ ಸಮಸ್ಯೆ ಎದುರಿಸುತ್ತಿದ್ದರು. ನೆಟ್‌ವರ್ಕ್ ಬಂದಿರುವುದರಿಂದ ಪ್ರಾಕೃತಿಕ ವಿಕೋಪ, ಆನೆ ದಾಳಿ, ಅನಾರೋಗ್ಯ ಸಮಸ್ಯೆ ಬಂದಾಗ ಆಟೋವನ್ನು ಕರೆಯಲು ಜನರಿಗೆ ನೆರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net