ಅತಿಥಿ ಉಪನ್ಯಾಸಕರ ಸಂಘದಿಂದ ಬೆಂಬಲ

mlc
Published on

ಮಂಗಳೂರು: ಶಿಕ್ಷಕರ ಪ್ರತ್ಯೇಕ ಸೇವಾ ಅಧಿನಿಯಮ ಕಾಯಿದೆ ಜಾರಿಗೆ ಚಿಂತನೆ ನಡೆಸಿರುವ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ಎಸ್.ಆರ್. ಹರೀಶ್ ಆಚಾರ್ಯ ಅವರನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅತಿಥಿ ಉಪನ್ಯಾಸಕರ ಸಂಘ ಬೆಂಬಲಿಸುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮನ್‌ಮೋಹನ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರಲ್ಲಿ ಹಲವು ಸಮಸ್ಯೆಗಳಿದ್ದು ಸೂಕ್ತ ಪರಿಹಾರಕ್ಕಾಗಿ ಈ ಅಧಿನಿಯಮ ಕಾಯಿದೆ ಎಂಬುವುದ ವಿನೂತನ ಚಿಂತನೆಯಾಗಿದ್ದು, ಉಪನ್ಯಾಸಕರ ಸಮಸ್ಯೆಗಳಿಗೆ ಸಹಾಯವಾಗಲಿದೆ. ಶಿಕ್ಷಕ ಸಮುದಾಯದ ಬಗ್ಗೆ ಚಿಂತನೆ ನಡೆಸಿರುವ ಹರೀಶ್ ಆಚಾರ್ಯರನ್ನು ಎಲ್ಲ ಖಾಸಗಿ, ಸರ್ಕಾರಿ ಶಾಲಾ ಕಾಲೇಜು ಶಿಕ್ಷಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲಾ ಕಾಲೇಜು ಶಿಕ್ಷಕರಿಗೆ ಆ ಹುದ್ದೆಯ ಮೂಲವೇತನವನ್ನು ಕನಿಷ್ಠ ವೇತನವನ್ನಾಗಿ ಪರಿಗಣಿಸಬೇಕು, ಗುತ್ತಿಗೆ ಅವಧಿಯು ಕನಿಷ್ಠ 36 ತಿಂಗಳು ಆಗಿರಬೇಕು. ಮಹಿಳಾ ಶಿಕ್ಷಕರಿಗೆ ಹೆಚ್ಚುವರಿ 5 ಸಾಂದರ್ಬಿಕ ರಜೆ ನೀಡುವ ಕುರಿತು ಸೇರಿ ಹಲವು ಸಂಗತಿಗಳನ್ನು ಮಸೂದೆಯಲ್ಲಿ ಸೇರಿಸಿಕೊಳ್ಳುವ ನಿಲುವಿನಲ್ಲಿ ಶಿಕ್ಷಕ ಸಮುದಾಯ ಸಂಪೂರ್ಣ ಹಿತದ ಆಶಯ ಅಡಗಿದೆ ಎಂದರು.

ಉಪನ್ಯಾಸಕರ ಸಂಘದ ಪದಾಧಿಕಾರಿಗಳಾದ ಧೀರಜ್, ಮಹಾಂತೇಶ್, ರಂಜಿತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net