42 ಜನ ಸದಸ್ಯರ ಬೆಂಬಲ

Support from 42 members
ಇಂಡಿ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ವಿಶೇಷ ಸಭೆಯಲ್ಲಿ ಕಾಸುಗೌಡ ಬಿರಾದಾರ ಮಾತನಾಡಿದರು. ಅನಂತ ಕೋಟಿ, ಅನೀಲಗೌಡ ಬಿರಾದಾರ, ಪುರಸಭೆ ಸದಸ್ಯ ದೇವೇಂದ್ರ ಕುಂಬಾರ, ವೀರನಗೌಡ ಪಾಟೀಲ, ಪ್ರದೀಪ ಮುರಗುಂಡಿ ಮತ್ತಿತರಿದ್ದರು.
Published on

ಇಂಡಿ: ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ವಿಶೇಷ ಸಾಮಾನ್ಯ ಸಭೆ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ನಡೆಯಿತು.

ಕಾಸುಗೌಡ ಬಿರಾದಾರ ಮಾತನಾಡಿ, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಗೆ ಈ ಮೊದಲು 100 ಸದಸ್ಯರಿದ್ದರು. ಅದರಲ್ಲಿ 32 ಮಂದಿ ತೀರಿಕೊಂಡಿದ್ದು, 68 ಸದಸ್ಯರು ಉಳಿದಿದ್ದಾರೆ. ಇಂದು ಕರೆದ ಸಭೆಯಲ್ಲಿ 42 ಸದಸ್ಯರು ಹಾಜರಿದ್ದು ನಮಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ನಮಗೆ ಹೆಚ್ಚು ಸದಸ್ಯರ ಬೆಂಬಲವಿದೆ ಎಂದು ತಿಳಿಸಿದರು.

ಸದಸ್ಯ ಶ್ರೀಕಾಂತ ದೇವರ ಮಾತನಾಡಿ, ಸಂಸ್ಥೆಯ 23 ಸದಸ್ಯರನ್ನು ಅನರ್ಹಗೊಳಿಸಿದ್ದು ಪತ್ರಿಕೆಯಲ್ಲಿ ಬಂದಿದೆ. ಆದರೆ, ಆ ಪ್ರಕ್ರಿಯೆ ಕಾನೂನು ರೀತಿ ಆಗಿಲ್ಲ. ಅವರಿಗೆ ನೋಟಿಸ್ ನೀಡದೆ ತೆಗೆದಿರುವುದು ಕಾನೂನು ಬಾಹಿರವಾಗುತ್ತದೆ ಎಂದರು.

ಸದಸ್ಯ ಅಜೀತ ಧನಶೆಟ್ಟಿ ಮಾತನಾಡಿ, 25ಕ್ಕೂ ಹೆಚ್ಚು ಅಜೀವ ಸದಸ್ಯರಿದ್ದು, ಅವರನ್ನು ಅನರ್ಹಗೊಳಿಸಿ ವಾಮ ಮಾರ್ಗ ಹಿಡಿದು ಅನಧಿಕೃತವಾಗಿ ಸದಸ್ಯರನ್ನು ಮಾಡಿದ್ದಾರೆ ಎಂದರು.

ಗೌರವ ಅಧ್ಯಕ್ಷ, ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಮಾತನಾಡಿ, ಸದಸ್ಯರಾದ ಕಾಸುಗೌಡ ಬಿರಾದಾರ ಮತ್ತು ಚಂದ್ರಶೇಖರ ಬಿರಾದಾರ ಸಂಸ್ಥೆಗೆ ಆಸ್ತಿ ದಾನ ನೀಡಿದ್ದು, ಅವರ ಸದಸ್ಯತ್ವ ರದ್ದು ಮಾಡಲು ಬರುವುದಿಲ್ಲ ಎಂದರು.

ಬಸವರಾಜ ದೇವರ, ಅಜೀತ ಧನಶೆಟ್ಟಿ ಅವರ ಸದಸ್ಯತ್ವವನ್ನು ಮರು ಸ್ಥಾಪಿಸಲಾಗಿದೆ. 2025 ಮೇ 11ರಂದು ಪತ್ರಿಕೆಯಲ್ಲಿ ಪ್ರಕಟಿತ 23 ಸದಸ್ಯರ ಪ್ರಕ್ರಿಯೆ ಕಾನೂನು ಬದ್ಧವಾಗಿಲ್ಲ. ಹೀಗಾಗಿ 23 ಸದಸ್ಯರ ಸದ್ಯಸತ್ವ ಮರುಸ್ಥಾಪಿಸಲಾಗಿದೆ ಎಂದರು.

ಶ್ರೀಕಾಂತ ಕುಡಿಗನೂರ ಮಾತನಾಡಿದರು. ಸಂಸ್ಥೆ ಸದಸ್ಯರಾದ ಚಂದ್ರಕಾಂತ ದೇವರ, ಮಲ್ಲಣ್ಣ ಬಿರಾದಾರ, ಈರಣ್ಣ ಮೈದರಗಿ, ಮಲ್ಲಿಕಾರ್ಜುನ ದೇವರ, ಶಾಂತು ಯರೋಳ, ಹಣಮಂತ ಹೊಟಗಿ, ಡಿ.ಎಚ್. ಜೋಶಿ, ಪ್ರಸನ್ನ ದೇಶಪಾಂಡೆ, ಪುರಸಭೆ ಮಾಜಿ ಅಧ್ಯಕ್ಷ ಅಶೋಕ ಪಾಟೀಲ, ಸಂಕೇತ ಬಗಲಿ, ಎಸ್.ಕೆ. ಆಸಂಗಿ ಮತ್ತಿತರರಿದ್ದರು.

ಸಭೆಯಲ್ಲಿ ಅನಂತ ಕೋಟಿ, ಅನೀಲಗೌಡ ಬಿರಾದಾರ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ವೀರನಗೌಡ ಪಾಟೀಲ, ಪ್ರದೀಪ ಮುರಗುಂಡಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net