ಜು.9 ರಂದು ನಡೆಯುವ ಹೋರಾಟಕ್ಕೆ ಬೆಂಬಲ

raichur
raichur
Published on

ರಾಯಚೂರು ಕಾರ್ಮಿಕ ವಿರೋಧಿಯಾಗಿರುವ ನಾಲ್ಕು ಸಂಹಿತೆಗಳನ್ನು ಖಂಡಿಸಿ ಜು.9 ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರ ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತದೆಂದು ಜಂಟಿ ಸಮಿತಿ ಸಂಚಾಲಕ ಶರಣಬಸವ.ಡಿ.ಎಸ್. ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಜಿಲ್ಲೆಯ ಅಂಗನವಾಡಿ,ಆಶಾ ಕಾರ್ಯಕರ್ತೆಯರು, ಕಾರ್ಖಾನೆ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕು ಕಸಿಯಲು ನಿರಂತರವಾಗಿ ತೊಡಗಿದೆ.

ಕಾರ್ಮಿಕರಿಗೆ ಕನಿಷ್ಟ ವೇತನ, ಸೇವಾ ಭದ್ರತೆ ಒದಗಿಸುವ ಬದಲು ಖಾಯಂ ನೇಮಕಾತಿ ನಿಲ್ಲಿಸಿ ಹೋರಗುತ್ತಿಗೆ, ಗುತ್ತಿಗೆ ನೇಮಕಾತಿ ನಡೆಸಿ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಕಾನೂನು ಬದ್ದ ಹಕ್ಕು ಕಸಿಯುವದನ್ನು ನಿಲ್ಲಿಸಲು ಆಗ್ರಹಿಸಿ ಮುಷ್ಕರ ನಡೆಯಲಿದೆ ಎಂದರು. 8 ಗಂಟೆ ಕೆಲಸ ಮಾಡುವ ಅವಧಿ ನಿಗಧಿಗೊಳಿಸಿ ಸಂಘ ಕಟ್ಟುವ ,ಮುಷ್ಕರ ಹಕ್ಕು ರದ್ದುಗೊಳಿಸುವನ್ನು ಕೈ ಬಿಡಬೇಕು.


36 ಸಾವಿರ ರೂ ನಿಗಧಿಪಡಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಕಟ್ಟಡ,ಅಟೋಚಾಲಕರು, ಅಪ್ರೈಂಟಿಸ್
ಗಳಿಗೆ ಮಾಸಿಕ ಪಿಂಚಣಿ ನಿಗಧಿಪಡಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳಿಗೆ ಮುಷ್ಕರ ನಡೆಯಲಿದೆ ಎಂದರು.

ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎನ್.ಎಸ್.ವೀರೇಶ ಮಾತನಾಡಿ,

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಹಕ್ಕು ಕಸಿಯುವ ಕೆಲಸ ಮಾಡುತ್ತಿವೆ. ಕಾರ್ಮಿಕರು ಪ್ರತಿಬಟನೆ ಹಕ್ಕು ಧಮನ ಮಾಡಲು ಕೇಂದ್ರ ಮುಂದಾದರೆ ರಾಜ್ಯ ಸರ್ಕಾರ ಮಹಿಳೆಯರು ಸೇರಿ ಕೆಲಸ ಸಮಯವನ್ನು 10 ಗಂಟೆಗೆ ವಿಸ್ತರಿಸಲು ಹೊರಟಿದೆ. ಸರ್ಕಾರಗಳ ನೀತಿ ವಿರೋಧಿಸಿ ನಡೆಯಲಿರುವಸಾರ್ವತ್ರಿಕ ಮುಷ್ಕರಕ್ಕೆ ಸಾರ್ವಜನಿಕರು ಬೆಂಬಲಿಸಬೇಕೆಂದರು.

ಈ ಸಂದರ್ಬದಲ್ಲಿ ಎಐಯುಟಿಸಿ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲರೆಡ್ಡಿ, ಎಚ್‌ಎಂಕೆಪಿ ಜಿಲ್ಲಾ ಕಾರ್ಯದರ್ಶಿ ಕಾಶಪ್ಪ, ಸಿಐಟಿಯು ಜಿಲ್ಲಾಧ್ಯಕ್ಷ ಎಚ್.ಪದ್ಮಾ, ಎಸಿಎಲ್ ಜಿಲ್ಲಾಧ್ಯಕ್ಷ ವೀರನಗೌಡ, ಐಎನ್‌ಟಿಯುಸಿ ಜಿಲ್ಲಾಧ್ಯಕ್ಷ ತಿಮ್ಪಪ್ಪ ಸ್ವಾಮಿ, ಅಬ್ದುಲ್ ಗನಿ, ವೆಂಕಟಸ್ವಾಮಿ, ಎಸ್.ಎನ್.ಪೀರಾ, ಶಿವಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net