ನಿಖಿಲ್‌ಗೆ ಸಾರಥ್ಯ, ಹಿರಿಯ ನಾಯಕರು ನೇಪಥ್ಯ?|Support for Nikhil, senior leaders behind

nikhil kumaraswamy
Published on

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಸೂತ್ರದ ಅಂತರ್ಯುದ್ಧ ನಡೆಯುತ್ತಿದ್ದರೆ, ಇತ್ತ ಜೆಡಿಎಸ್‌ನಲ್ಲಿ ನಿಖಿಲ್ ಕುಮಾರಸ್ವಾಮಿಗೆ ಪಟ್ಟಕಟ್ಟುವ ಪ್ರಯತ್ನ ನಡೆದಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಕುಟುಂಬದ 3ನೇ ತಲೆಮಾರಿನ ನಾಯಕನನ್ನಾಗಿ ನಿಖಿಲ್‌ನನ್ನು ಬಿಂಬಿಸುವ ಉದ್ದೇಶ(The intention is to portray Nikhil as the 3rd generation leader of the Deve Gowda family) ಇದರ ಹಿಂದಿದೆ.

ಕಳೆದ ವಿಧಾನಸಭೆ, ಲೋಕಸಭೆ, ಉಪ ಚುನಾವಣೆಯಲ್ಲಿ ಪೆಟ್ಟು ತಿಂದಿರುವ ಜೆಡಿಎಸ್ ಕ್ರಿಯಾಶೀಲಗೊಳಿಸುವ ಅನಿವಾರ್ಯತೆಗೆ ಜೆಡಿಎಸ್ ಸಿಲುಕಿದೆ. ಮೈತ್ರಿ ಮಾಡಿಕೊಂಡಿರುವದುರಿಂದ ಪಕ್ಷವನ್ನು ಜೀವಂತವಾಗಿಡಲೇಬೇಕಿದೆ. ಹಳೇ ಮೈಸೂರು ಜೆಡಿಎಸ್‌ನಿಂದ ಕೈತಪ್ಪದಂತೆ ನೋಡಿಕೊಳ್ಳಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಅಳೆದೂ ತೂಗಿ ಸತತ ಮೂರು ಚುನಾವಣೆಯಲ್ಲಿ ಸೋಲು ಕಂಡಿದ್ದರೂ ನಿಖಿಲ್ ಕುಮಾರಸ್ವಾಮಿಗೇ ರಾಜ್ಯಾಧ್ಯಕ್ಷ ಪಟ್ಟಕಟ್ಟಲು ಕುಟುಂಬದಲ್ಲಿ ಭರ್ಜರಿ ತಯಾರಿ ನಡೆದಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿಖಿಲ್‌ಗೆ ಪಟ್ಟಕಟ್ಟುವ ಸುಳಿವು ನೀಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಇದನ್ನು ಮಾರ್ಮಿಕವಾಗಿ ಪ್ರಸ್ತಾಪಿಸಿದ್ದರು. ಈ ವಿಷಯ ಈಗ ಜೆಡಿಎಸ್‌ನಲ್ಲಿ ತಲ್ಲಣ ಉಂಟು ಮಾಡಿದೆ.

ವಿಧಾನಸಭೆ ಚುನಾವಣೆ ಇನ್ನೂ ಮೂರುವರೆ ವರ್ಷ ಇರುವಾಗಲೇ ಪಟ್ಟಕಟ್ಟಿ ರಾಜಕೀಯ ನಾಯಕರು ಹಾಗೂ ಸಾರ್ವಜನಿಕರ ಜತೆ ಒಡನಾಟ ಬೆಳೆಸಿ ಭವಿಷ್ಯದ ನಾಯಕನನ್ನಾಗಿ ರೂಪಿಸುವ ತಂತ್ರಗಾರಿಕೆ ನಿಖಿಲ್‌ಗೆ ಚುಕ್ಕಾಣಿ ನೀಡುವುದರ ಹಿಂದಿದೆ.

ರಾಜ್ಯಾಧ್ಯಕ್ಷ ಪಟ್ಟ, ಯಾರಿಗೂ ಇಲ್ಲ ಇಷ್ಟ

ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯ ಜೆಡಿಎಸ್ ರಥ ಎಳೆಯಲು ಸಾರಥಿ ಅವಶ್ಯವಿದೆ. ಆದರೆ ಈ ಹುದ್ದೆಗೆ ಬರಲು ಪಕ್ಷದಲ್ಲಿ ಯಾರಿಗೂ ಇಷ್ಟವಿಲ್ಲ. ಚುನಾವಣೆ ಮೂರುವರೆ ವರ್ಷ ಇರುವುದರಿಂದ ‘ಬಂಡವಾಳ’ ಹೂಡಲು ಯಾರೂ ಮುಂದೆ ಬರುವವರಿಲ್ಲ. ಯಾರೇ ಅಧ್ಯಕ್ಷರಾದರೂ ನೆಪ ಮಾತ್ರಕ್ಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಜತೆಗೆ ‘ಅಪ್ಪ-ಮಗ’ನ ಅಣತಿಯಂತೆಯೇ ಪಕ್ಷ ಮುನ್ನಡೆಸಲೇಬೇಕಾಗಿರುವುದರಿಂದ ಹಿರಿಯ ಶಾಸಕರು ಹಿಂದೇಟು ಹಾಕುತ್ತಿದ್ದಾರೆ.

ಈ ಹಿಂದೆ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷರನ್ನಾಗಿ ಮಾಡಿದರೂ ಪಕ್ಷಕ್ಕೆ ನಿರೀಕ್ಷಿತ ಲಿತಾಂಶ ಬರಲಿಲ್ಲ. ‘ಹಳ್ಳಿಹಕ್ಕಿ’ ಮೂವರು ಶಾಸಕರುನ್ನು ಹಾರಿಸಿಕೊಂಡು ಹೋಯಿತು. ಸಿ.ಎಂ.ಇಬ್ರಾಹಿಂ ಮಾತು ಮಥಿಸಲಿಲ್ಲ, ಪಕ್ಷಕ್ಕೆ ಬಲ ತುಂಬಲಿಲ್ಲ. ಹಾಗಾಗಿ ಯಾರನ್ನು ರಾಜ್ಯಾದ್ಯಕ್ಷರನ್ನಾಗಿ ಮಾಡಿದರೂ ಇಷ್ಟೇ ಎಂಬ ಆಲೋಚನೆ ಕೂಡ ದೇವೇಗೌಡ ಹಾಗೂ ಕುಮಾರಸ್ವಾಮಿ ಮನಸ್ಸಿನಲ್ಲಿ ಕುಳಿತಿದೆ. ಕಾರಣ ಕುಟುಂಬ ರಾಜಕಾರಣದ ಅಪವಾದ ಬಂದರೂ ಸರಿಯೇ ನಿಖಿಲ್‌ನನ್ನೇ ಅಧ್ಯಕ್ಷನನ್ನಾಗಿ ಮಾಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಂತಿದೆ.

ರೇವಣ್ಣ ಕುಟುಂಬದ ಕಡೆಗಣನೆ

ಇನ್ನು, ರೇವಣ್ಣ ಕುಟುಂಬ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಕೊಂಡಿದೆ. ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದಾರೆ. ಇನ್ನೊಬ್ಬ ಪುತ್ರ ಸೂರಜ್ ಜಾಮೀನು ಮೇಲೆ ಹೊರಗಿದ್ದಾರೆ. ಖುದ್ದು ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಕೂಡ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಕುಟುಂಬದ ಯಾವ ಹೆಸರುಗಳು ಪಕ್ಷದ ಯಾವ ಹುದ್ದೆಯ ಮುನ್ನೆಲೆಗೂ ಬರುವಂತಿಲ್ಲ. ಹಾಗಾಗಿ ನಿಖಿಲ್‌ಗೆ ಪಟ್ಟ ನಿಶ್ಚಿತ ಎಂಬಂತಾಗಿದೆ.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಪಕ್ಷದ ವರಿಷ್ಠರ ಜತೆ ಮುನಿಸಿಕೊಂಡು ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಇನ್ನೊಂದೆಡೆ ಎಸ್.ಎಲ್.ೋಟ್ನೇಕರ್ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಪಕ್ಷದ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ. ತಮ್ಮನ್ನು ಪಕ್ಷ ಬಳಸಿಕೊಳ್ಳುವುದು ಬಿಡುವುದು ಪಕ್ಷದ ನಾಯಕರಿಗೆ ಬಿಟ್ಟದ್ದು ಎಂದು ಬಹಿರಂಗವಾಗಿಯೇ ಅಸಮಾಧಾನ ಕೂಡ ಹೊರ ಹಾಕಿದ್ದಾರೆ. ಯುವ ನಾಯಕ ಶರಣಗೌಡ ಕಂದಕೂರ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕ ವರಿಷ್ಠರ ವಿರುದ್ಧ ಕುದಿಮೌನ ತಾಳಿ ಪಕ್ಷದ ಚಟುವಟಿಕೆಗಳಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಈ ಎಲ್ಲ ರಾದ್ಧಾಂತಗಳ ನಡುವೆಯೇ ಪಕ್ಷದ ಸಾರಥ್ಯವನ್ನು ನಿಖಿಲ್‌ಗೆ ವಹಿಸಲು ಗೌಡರ ಕುಟುಂಬ ಒಲವು ತೋರಿರುವು ಅಚ್ಚರಿಯ ಬೆಳವಣಿಗೆ.

ನಿಖಿಲ್‌ಗೆ ಪಟ್ಟ ಲಾಭ ಏನು?

-ಯುವ ನಾಯಕತ್ವದ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ. -ಕೇಂದ್ರದಲ್ಲಿ ಕುಮಾರಸ್ವಾಮಿ ಸಚಿವರಾಗಿರುವುದರಿಂದ ಬಿಜೆಪಿ ದೆಹಲಿ ನಾಯಕರ ಒಡನಾಟ ವೃದ್ಧಿ. -ಕುಟುಂಬದ 3ನೇ ತಲೆಮಾರು ಮುನ್ನೆಲೆಗೆ. -ಸತತ ಮೂರು ಚುನಾವಣೆ ಸೋಲಿನ ಕಾರಣ ಪಟ್ಟಕಟ್ಟಿ ಸ್ಥಾನಮಾನ.

ನಷ್ಟ ಏನು? -ಕುಟುಂಬ ರಾಜಕಾರಣದ ಆರೋಪ. -ಪಕ್ಷದ ಹಿರಿಯ ನಾಯಕರ ಮುನಿಸು ಶಮನ ಕಷ್ಟ. -ಹಿರಿಯ ನಾಯಕರು, ಶಾಸಕರು ನಿಖಿಲ್ ಕೆಳಗೆ ಕೆಲಸ ಮಾಡಲು ಹಿಂದೇಟು ಸಾಧ್ಯತೆ. -ನಿಖಿಲ್ ಒಂದೂ ಚುನಾವಣೆ ಗೆಲ್ಲದ ಕಾರಣ ಅನುಭವದ ಕೊರತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net