ನಾಮಪತ್ರ ಹಿಂಡೆದ ಪಟ್ಟಣಶೆಟ್ಟಿಯಿಂದ ಜೋಶಿಗೆ ಬೆಂಬಲ

New Pattanashetty new
Published on

ಹುಬ್ಬಳ್ಳಿ : ಧಾರವಾಡ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ವೀರೋಂಕೆ ವೀರ್ ಇಂಡಿಯನ್ ಪಾರ್ಟಿಯ ಅಭ್ಯರ್ಥಿ, ಮಾಜಿ ಸೈನಿಕ ರವಿ ಪಟ್ಟಣಶೆಟ್ಟಿ ಅವರು ಸೋಮವಾರ ನಾಮಪತ್ರ ಹಿಂಪಡೆದು, ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ಅವರು ಸೋಮವಾರದಂದು ರವಿ ಪಟ್ಟಣಶೆಟ್ಟಿ ಅವರಿಗೆ ಶಾಲು ಹೊದಿಸಿ, ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರವಿ ಪಟ್ಟಣಶೆಟ್ಟಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ರಾಜ್ಯ ಸರ್ಕಾರ ಸಮರ್ಥಿಸುವ ರೀತಿಯಲ್ಲಿ ಓಲೈಕೆ ರಾಜಕಾರಣದ ಹೇಳಿಕೆ ನೀಡಿದ್ದು ಮನಸ್ಸಿಗೆ ಆಘಾತಕಾರಿಯಾಯಿತು. ರಾಷ್ಟ್ರ ವಿರೋಧಿ ಚಟುವಟಿಕೆಗಳ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಧಾರವಾಡದಲ್ಲಿ ಪ್ರಲ್ಹಾದ ಜೋಶಿ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಈ ಬರ್ಬರ ಹತ್ಯೆ ವಿರೋಧಿಸುವುದು ಹಾಗೂ ಸಂತ್ರಸ್ತ ಹಿರೇಮಠ ಕುಟುಂಬದೊಂದಿಗೆ ಮಾಜಿ ಸೈನಿಕರ ಸಂಘಟನೆ ಕೈ ಜೋಡಿಸುವ ಉದ್ದೇಶದಿಂದ ನಾಮಪತ್ರ ಹಿಂಪಡೆದಿದ್ದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net