ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ; ಡಾ.ಈ.ಸಿ.ನಿಂಗರಾಜ್‌ಗೌಡ

Ningaraj-gowda
Published on

ಮೈಸೂರು: ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಬೆಂಬಲ ಸೂಚಿಸಿದ್ದಾರೆ.

ಅನೇಕ ವರ್ಷಗಳ ಅತಿಥಿ ಉಪನ್ಯಾಸಕರ ಹೋರಾಟದ ಫಲವಾಗಿ ಬಿಜೆಪಿ ಸರ್ಕಾರ ವಾಸ್ತವ ಸಮಸ್ಯೆ ಅರಿತು ಅವರ ಪ್ರಮುಖ ಬೇಡಿಕೆಯಾದ ಮಾಸಿಕ ವೇತನವನ್ನು ಮೂರು (32 ಸಾವಿರ ರೂ.) ಪಟ್ಟು ಹೆಚ್ಚಿಸಿತ್ತು. ಸಮಾಜದಲ್ಲಿ ಗೌರವದಿಂದ ಬದುಕಲು ಸಂಪುಟ ಸಭೆಯಲ್ಲಿ ಆದೇಶ ಹೊರಡಿಸಿ ನುಡಿದಂತೆ ನಡೆದಿತ್ತು. ಆದರೆ ಈ ಕಾಂಗ್ರೆಸ್ ಸರ್ಕಾರ ಕೇವಲ 5 ಸಾವಿರ ರೂ. ವೇತನ ಹೆಚ್ಚಿಸಿ ಪ್ರಸ್ತುತ ಬೇಡಿಕೆಯಾದ ಸೇವಾ ವಿಲೀನಾತಿಗೆ ನೆರವಾಗಿಲ್ಲ. 45 ದಿನಗಳಿಂದ ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದಾರೆ. ಅವರ ಮುಷ್ಕರಕ್ಕೆ ಗೌರವ ನೀಡಿ, ಸೇವಾ ಕಾಯಂಗೊಳಿಸಬೇಕು ಎಂದು ಪ್ರತಿಕಾ ಹೇಳಿಕೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 7ನೇ ಹಣಕಾಸು ಆಯೋಗದ ಶಿಫಾರಸಿನಂತೆ ಪ್ರತಿ ಅವಧಿಗೆ 1500 ರೂ. ಅಥವಾ ತಿಂಗಳಿಗೆ ಕನಿಷ್ಠ 50,000 ರೂ. ಗೌರವಧನ ನಿಗದಿಪಡಿಸುವಂತೆ ಯುಜಿಸಿಯ 537ನೇ ಸಭೆಯಲ್ಲಿ ಆದೇಶಿಸಲಾಗಿದೆ. ಆದ್ದರಿಂದ ಸರ್ಕಾರ ಯುಜಿಸಿಯ ಸುತ್ತೋಲೆಯನ್ನು ಪಾಲಿಸಬೇಕು ಮತ್ತು ಎಲ್ಲ ಅತಿಥಿ ಉಪನ್ಯಾಸಕರನ್ನೂ ಕಾಯಂಗೊಳಿಸಬೇಕು. ಈ ಕೂಡಲೇ ಸೇವಾ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾನೂನಿನಲ್ಲಿ ಬದಲಾವಣೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net