ವೈದ್ಯರ ಮುಷ್ಕರಕ್ಕೆ ಬೇಲೂರಿನಲ್ಲಿ ಬೆಂಬಲ

IMG_20240817_115111
Published on
  • ಬೇಲೂರು : ಕೋಲ್ಕತ್ತದಲ್ಲಿ ಕರ್ತವ್ಯನಿರತ ತರಬೇತಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಹಾಗೂ ಆರೋಗ್ಯ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಒಂದು ದಿನದ ವೈದ್ಯಕೀಯ ಸೇವೆ ಬಂದ್‌ಗೆ ಶನಿವಾರ ಬೇಲೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

  • ಬೇಲೂರು ಪಟ್ಟಣದಲ್ಲಿರುವ ಕ್ಲಿನಿಕ್‌ಗಳ ವೈದ್ಯರು ಕ್ಲಿನಿಕ್ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರೆ, ಇತ್ತ ಸರ್ಕಾರಿ ಆಸ್ಪತ್ರೆ ಸಹ ಬಾಗಿಲು ಮುಚ್ಚಿ ವೈದ್ಯರು ಮತ್ತು ಸಿಬ್ಬಂದಿ ಬೆಂಬಲ ನೀಡಿದರು. ದೂರದೂರುಗಳಿಂದ ಚಿಕಿತ್ಸೆಗೆಂದು ಬಂದಿದ್ದ ರೋಗಿಗಳು ಪರದಡುವಂತಾಯಿತು.
    ಮುಷ್ಕರದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗೂ ಅವಕಾಶವಾಗದಂತೆ ಮುನ್ನೆಚ್ಚರಿಯಾಗಿ ಸರ್ಕಾರಿ ಆಸ್ಪತ್ರೆಯ ಎಲ್ಲ ಬಾಗಿಲುಗಳಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಚಿತ್ರ:17(ಬಿಎಲ್‌ಆರ್)1-ಕರ್ತವ್ಯನಿರತ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಕಾಸಗಿ ಕ್ಲಿನಿಕ್ ಮತ್ತು ರ್ಸಾರಿ ಆಸ್ಪತ್ರೆ ಭಾಗಿಲು ಬಂದ್ ಮಾಡಿದ್ದರಿಂದ ಸರ್ಕಾರಿ ಆಸ್ಪತ್ರೆ ತುರ್ತು ಚಿಕಿತ್ಸಾ ಬಾಗಿಲಲ್ಲೆ ಕಾದು ನಿಂತಿರುವ ರೋಗಿಗಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net