

ಪಾಂಡವಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಪಕ್ಷದ ಬೆಂಬಲಿತ ಅಭ್ಯರ್ಥಿಗಳೊಂದಿಗೆ ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಷೇರುದಾರರ ಸದಸ್ಯರ ಬಳಿ ಶನಿವಾರ ಮತಯಾಚನೆ ಮಾಡಿದರು.
ತಾಲೂಕಿನ ಚಿಕ್ಕಮರಳಿ, ಪಟ್ಟಸೋಮನಹಳ್ಳಿ, ನುಗ್ಗಹಳ್ಳಿ, ಕನಗನಮರಡಿ, ತಿಮ್ಮನಕೊಪ್ಪಲು, ಚಿಕ್ಕಬ್ಯಾಡರಹಳ್ಳಿ, ತಾಳಶಾಸನ ಸೇರಿದಂತೆ ವಿವಿಧ ಗ್ರಾಮಗಳಿಗೆ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್‌ಕುಮಾರ್, ತಾಲೂಕು ಅಧ್ಯಕ್ಷ ಧನಂಜಯ್ ನೇತೃತ್ವದಲ್ಲಿ ಪ್ರಚಾರ ನಡೆಸಿದ ಅಭ್ಯರ್ಥಿಗಳು, ಆರ್ಥಿಕತೆಯ ಭಾಗವಾಗಿರುವ ಸಹಕಾರ ಸಂಘದ ಉಳಿವು ಅಗತ್ಯವಾಗಿದ್ದು, ಟಿಎಪಿಸಿಎಂಎಸ್‌ನಲ್ಲಿ ಈ ಹಿಂದೆ ನಡೆದಿರುವ ಭ್ರಷ್ಟಾಚಾರ, ದುರಾಡಳಿತವನ್ನು ಕೊನೆಗಾಣಿಸಲು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ಮುಕ್ತ ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಅಭ್ಯರ್ಥಿಗಳಾದ ಎನ್.ಸೋಮಶೇಖರ್, ಎಂ.ಚಿಕ್ಕಣ್ಣ, ಕೆ.ಜೆ.ದುರ್ಗೇಶ್, ಮಂಜುನಾಥ್, ಲಕ್ಷ್ಮಮ್ಮ, ಎಚ್.ಎಸ್.ಲಲಿತಾ, ವೀರಭದ್ರಸ್ವಾಮಿ, ಮುಖಂಡರಾದ ಚಿಕ್ಕಮರಳಿ ನವೀನ್, ಸೋಮಾಚಾರಿ, ಜೀವನ್, ಮಂಜಾಚಾರಿ, ಚನ್ನೇಗೌಡ, ಪ್ರವೀಣ್ ಇತರರು ಇದ್ದರು.