ಸೆ.27ರ ಭಾರತ್ ಬಂದ್‌ಗೆ ಬೆಂಬಲ ನೀಡುವಂತೆ ರಾಜ್ಯ ರೈತ ಸಂಘಟನೆ ಮನವಿ

Bharath bandh
Published on

ಮಡಿಕೇರಿ: ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿ ಖಂಡಿಸಿ ಸೆ27ರಂದು ಹಮ್ಮಿಕೊಂಡಿರುವ ಭಾರತ್ ಬಂದ್‌ಗೆ ಜಿಲ್ಲೆಯ ವಿವಿಧ ಸಂಘಟನೆಗಳ ಬೆಂಬಲ ನೀಡಬೇಕು ಎಂದು ರಾಜ್ಯ ರೈತ ಸಂಘಟನೆಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮನವಿ ಮಾಡಿದರು.

‘‘ರೈತ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ಸಂಕಷ್ಟಗಳು ಎದುರಾಗಲಿದೆ. ಜನಪರ ಪರವಾದ ಹಕ್ಕುಗಳಿಗಾಗಿ, ದೇಶದ ಜನತೆಯ ವಿರುದ್ಧವಾಗಿ ಹಲವು ಕಾಯ್ದೆಗಳ ಜಾರಿಗೆ ತರಲು ಮುಂದಾಗಿ ದೇಶ ವಿರೋಧಿಯಾಗಿ ಕಾರ್ಪೋರೇಟ್ ಕಂಪನಿ ನೀತಿ ಜಾರಿಗೆ ಮುಂದಾಗುತ್ತಿವೆ. ಸರ್ಕಾರಿ ಒಡೆತನದ ಎಲ್ಲವನ್ನು ಮಾರಾಟಕ್ಕೆ ಮುಂದಾಗಿರುವುದೇ ದೇಶ ವಿರೋಧಿಯಾಗಿದೆ ಎಂದ ಅವರು, ಸೆ೨೭ ರಂದು ಹಮ್ಮಿಕೊಂಡಿರುವ ಬಂದ್‌ಗೆ ಬಿಜೆಪಿ ಹೊರತುಪಡಿಸಿದಂತೆ ಪ್ರತಿಯೊಬ್ಬರು ಬೆಂಬಲ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಣ್ಣಪ್ಪ, ಆದಿವಾಸಿ ಭಾರತ್ ಮಹಾಸಭಾದ ಜಿಲ್ಲಾಧ್ಯಕ್ಷ ಚಿಣ್ಣಪ್ಪ, ಪ್ರಮುಖರಾದ ಎಸ್.ಆರ್.ಮಂಜುನಾಥ್, ಚಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net