7 ತಾಸು ತ್ರೀ ಫೇಸ್ ವಿದ್ಯುತ್ ಪೂರೈಸಿ

LAXMESHWAR PROTEST
Published on

ಲಕ್ಷ್ಮೇಶ್ವರ: ಪಂಪ್​ಸೆಟ್​ಗಳಿಗೆ 7 ತಾಸು ತ್ರೀ ಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ತಾಲೂಕಿನ ಸೂರಣಗಿ ಹೆಸ್ಕಾಂ ಉಪಶಾಖೆ ಕಚೇರಿಗೆ ಮುತ್ತಿಗೆ ಹಾಕಿದ ಸೂರಣಗಿ, ಸುವರ್ಣಗಿರಿ ತಾಂಡಾ, ದೊಡ್ಡೂರು, ಯಲ್ಲಾಪೂರ, ಬಾಲೆಹೊಸೂರು, ಉಂಡೇನಹಳ್ಳಿ ಗ್ರಾಮದ ನೂರಾರು ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ರೈತರಾದ ನಾಗಯ್ಯ ಹಿರೇಮಠ, ಕುಮಾರ ಬೆಟಗೇರಿ ಮಾತನಾಡಿ, ಸೂರಣಗಿ ಸೇರಿ ಸುತ್ತಲಿನ ಎಲ್ಲ ಗ್ರಾಮಗಳಲ್ಲಿ ಕಳೆದ 5-6 ದಿನದಿಂದ ಪಂಪ್​ಸೆಟ್​ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಮೊದಲು

ಹಗಲಿನಲ್ಲಿಯೇ ಏಳು ತಾಸು ವಿದ್ಯುತ್ ಪೂರೈಸಲಾಗುತ್ತಿತ್ತು. ಈಗ ಹಗಲಿನ ಬದಲಾಗಿ ರಾತ್ರಿಯಲ್ಲಿ ಅಸಮರ್ಪಕ ವಿದ್ಯುತ್ ಪೂರೈಸುತ್ತಿರುವುದು ರೈತರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆಗಳು ಮಳೆಯಿಲ್ಲದೇ ಒಣಗುತ್ತಿದ್ದು, ನೀರುಣಿಸಿ ಬೆಳೆ ಸಂರಕ್ಷಿಸಿಕೊಳ್ಳಲು ವಿದ್ಯುತ್ ಸಮಸ್ಯೆ ಉಂಟಾಗಿದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಹೆಸ್ಕಾಂ ಅಧಿಕಾರಿ ಗುರುರಾಜ ಸಿ., ಸಮೀರ ಮುಳಗುಂದ ಮಾತನಾಡಿ, ರೈತರ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಎರಡು ದಿನಗಳಲ್ಲಿ ಬಗೆಹರಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಓಂಕಾರಪ್ಪ ಲಮಾಣಿ, ಹನಮಂತಪ್ಪ ಲಮಾಣಿ, ಸೋಮಣ್ಣ ನಿಂಗನಗೌಡರ, ಪ್ರಕಾಶ ಕಳ್ಳಿಹಾಳ, ಕಲ್ಲಪ್ಪ ಶೆಟ್ಟಣ್ಣವರ, ಮಹಿಬಗೌಡ ಪಾಟೀಲ, ವಿನೋದ ಲಮಾಣಿ, ಆನಂದ ತಳಗೇರಿ, ನೀಲಪ್ಪ ತಳಗೇರಿ, ಪಿಎಸ್​ಐ

ಯುಸೂಫ್ ಜಮೂಲಾ, ಅಪರಾಧ ವಿಭಾಗದ ಪಿಎಸ್​ಐ ವಿ.ಜಿ. ಪವಾರ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net