ಡೇರಿಗೆ ಗುಣಮಟ್ಟದ ಹಾಲು ಪೂರೈಸಿ

Published on

ವಿಜಯವಾಣಿ ಸುದ್ದಿಜಾಲ ಮಂಡಿಕಲ್ಲು

ಹಾಲು ಉತ್ಪಾದಕರ ಸಹಕಾರ ಸಂದ ಸದಸ್ಯರ ವಾರ್ಷಿಕ ಮಹಾಸಭೆ

ಸಂದ ಆವರಣದಲ್ಲಿ ನಡೆಯಿತು.

ಸಂದ ಅಧ್ಯಕ್ಷ ಎಂ.ಎನ್​.ಅನಿಲ್​ ಮಾತನಾಡಿ, ಹಾಲು ಉತ್ಪಾದಕರು ಡೇರಿಗೆ ಉತ್ತಮ ದರ್ಜೆಯ, ಸ್ವಚ್ಛ ಹಾಲು ನೀಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ.ಮಂಡಿಕಲ್ಲು ಪರಿಸರದಲ್ಲಿ ದಿನನಿತ್ಯ ಹಾಲು ಕೊಳ್ಳುವ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಸಹಕಾರ ಸಂಕ್ಕೂ ಉತ್ತಮ ಲಾಭವಾಗಿದೆ.ವರ್ಷದಲ್ಲಿ 180 ದಿನ ಸಂಕ್ಕೆ ಹಾಲು ಪೂರೈಸಿದ ರೈತರಿಗೆ ಷೇರು ಸದಸ್ಯತ್ವ ನೀಡಲಾಗುವುದು. ಸಂದ 40 ವರ್ಷದ ಹಳೆಯ ಕಟ್ಟಡವಾಗಿದ್ದು, ಗೋಡೆಗಳೆಲ್ಲ ಶಿಥಲವಾಗಿ ಮಳೆ ನೀರು ಒಳಬರುವಂತಾಗಿದೆ.ಸದಸ್ಯರು ಒಪ್ಪಿದಲ್ಲಿ ನೂತನ ಕಟ್ಟದ ನಿರ್ಮಿಸಲಾಗುವುದು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಎಂ.ರಾಮಕೃಷ್ಣ ಮಾತನಾಡಿ, ಸಂದ ಪ್ರಾರಂಭ ಬರೀ 11 ರೂಪಾಯಿ ಷೇರು ಸದಸ್ಯತ್ವ ನೀಡುವ ಮೂಲಕ ಪ್ರಾರಂಭಿಸಲಾಯಿತು.ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ನಡೆಸುಕೊಂಡು ಹೋಗಿ ಎಂದರು.ವಿಸ್ತರಣಾ ಅಧಿಕಾರಿ, ಸಂದ ನಿರ್ದೇಶಕರು, ಸಿಬ್ಬಂದಿ, ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net