ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸಿ

20 TKE 3
ಲಕ್ಕೇನಹಳ್ಳಿ ಭಾಗದ ಐಪಿ ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಬೇಕೆಂದು ಆಗ್ರಹಿಸಿ ರೈತರು ಮೆಸ್ಕಾಂ ಶಾಖಾಧಿಕಾರಿ ಜೆ.ಅಜೆಯ್‌ಗೆ ಮನವಿ ಸಲ್ಲಿಸಿದರು.
Published on

ತರೀಕೆರೆ: ತಾಲೂಕಿನ ಲಕ್ಕೇನಹಳ್ಳಿ ಭಾಗದ ಐಪಿ ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ರೈತರು ಮೆಸ್ಕಾಂ ಶಾಖಾಧಿಕಾರಿ ಜೆ.ಅಜೇಯ್‌ಗೆ ಶನಿವಾರ ಮನವಿ ಸಲ್ಲಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಪಿ.ಕುಮಾರ್ ಮಾತನಾಡಿ, ಸರ್ಕಾರ ರೈತರ ಪಂಪ್ ಸೆಟ್‌ಗಳಿಗೆ 7 ಗಂಟೆ ತ್ರೀೇಸ್ ವಿದ್ಯುತ್ ಪೂರೈಸಬೇಕೆಂಬ ಆದೇಶ ಹೊರಡಿಸಿದ್ದರೂ ಲಕ್ಕೇನಹಳ್ಳಿ ಭಾಗದ ರೈತರ ಜಮೀನುಗಳಲ್ಲಿರುವ ಐಪಿ ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದೆ. ಬೇಸಿಗೆ ಆರಂಭವಾಗಿರುವುದರಿಂದ ಬೆಳೆ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ರೈತರ ಹಿತದೃಷ್ಟಿ ಯಿಂದ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಶ್ರೀನಿವಾಸ್, ಮಂಜುನಾಥ್, ಆನಂದ, ಗೋಪಾಲ, ನಟರಾಜ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net