

ಕಾರ್ಗಲ್: ಬಗುರ್‌ಹುಕುಂ ಸಾಗುವಳಿದಾರರು ಬೆಳೆದ ಬೆಳೆಗಳಿಗೂ ಔಷಧೋಪಚಾರಗಳನ್ನು ಪೂರೈಸುವಂತೆ ಅರಳಗೋಡು ಗ್ರಾಪಂಸದಸ್ಯ ವಿ.ಶರತ್ ಕಾಳಮಂಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಭಾಗದಲ್ಲಿ ಖಾತೆಪತ್ರೆ ಇಲ್ಲದ ಬಗುರ್‌ಹುಕುಂ ಸಾಗುವಳಿದಾರರು ಸಾಕಷ್ಟು ಸಂಖ್ಯೆಯಲ್ಲಿದ್ದು ಇವರ‌್ಯಾರಿಗೂ ಕೃಷಿ ಇಲಾಖೆಯಿಂದ ಔಷಧ, ಪರಿಕರಗಳು ಸಿಗುವುದಿಲ್ಲ. ಕೃಷಿ ಇಲಾಖೆಯು ಈ ರೀತಿಯ ಬೇಧ ಅನುಸರಿಸದೆ ಎಲ್ಲ ಕೃಷಿಕರಿಗೂ ಅಗತ್ಯವಾದ ಔಷಧ ಪೂರೈಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.