ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಸಿ

Untitled design (1)
ಕುರುಗೋಡಿನಲ್ಲಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪಗೆ ಮನವಿ ಸಲ್ಲಿಸಿದರು. ತಾಲೂಕು ಮಂಡಲ ಅಧ್ಯಕ್ಷ ಕೆ.ಹೂವಣ್ಣ, ಜಿಲ್ಲಾ ಪ್ರ. ಕಾರ್ಯದರ್ಶಿ ಮದಿರೆ ಕುಮಾರಸ್ವಾಮಿ, ಪ್ರಮುಖರಾದ ಎ.ತಿಮ್ಮಾರೆಡ್ಡಿ, ಗುರುಲಿಂಗನಗೌಡ, ತಿಪ್ಪೇಶ್, ಕೆ.ಶಿವಪ್ರಸಾದ್ ಇತರರಿದ್ದರು
Published on

ಕುರುಗೋಡು: ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆ, ಕಾಲುವೆ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ತಹಸೀಲ್ದಾರ್ ಮಲ್ಲೇಶಪ್ಪಗೆ ಶುಕ್ರವಾರ ಮನವಿ ಸಲ್ಲಿಸಿದರು.


ಬಿಜೆಪಿ ರೈತ ಮೋರ್ಚಾ ತಾಲೂಕು ಮಂಡಲ ಅಧ್ಯಕ್ಷ ಕೆ.ಹೂವಣ್ಣ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿರುವುದು ಸರಿಯಾದ ಕ್ರಮವಲ್ಲ.

ಕೂಡಲೇ ಆ ಯೋಜನೆಗಳನ್ನು ಪ್ರಾರಂಭಿಸಬೇಕು. ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಸದಿರುವುದರಿಂದ ಬೆಳೆಗಳು ಒಣಗುತ್ತಿವೆ. ಆದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.


ಬಿಜೆಪಿ ರೈತಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮದಿರೆ ಕುಮಾರಸ್ವಾಮಿ, ಪ್ರಮುಖರಾದ ಗುರುಲಿಂಗನಗೌಡ, ತಿಪ್ಪೇಶ್, ಕೆ.ಶಿವಪ್ರಸಾದ್, ವೈ.ಮಲ್ಲಿಕಾರ್ಜುನ, ಎಸ್.ನಟರಾಜ, ಎನ್.ಕೊಮಾರೆಪ್ಪ, ಎನ್.ಬಸವರಾಜ, ವೆಂಕಟೇಶ, ಎ.ಮಲ್ಲಿಕಾರ್ಜುನ, ಶಂಕ್ರಪ್ಪ, ಜಿ.ಕೆ.ದೇವೇಂದ್ರ, ಗಿರಿ, ಕಲ್ಲುಕಂಭ ಬಸವರಾಜ, ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net