

ಹೊನ್ನಾವರ: ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಉಜ್ವಲಗೊಳಿಸುವ ಯಕ್ಷಗಾನವು ಭಾಷೆ, ಮನಸ್ಸು, ಭಾವ ಶುದ್ಧೀಕರಿಸಲು ಪೂರಕವಾಗಿದೆ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಗುಣವಂತೆಯ ಯಕ್ಷಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಕಾರ್ಯಕ್ರಮ ‘ಯಕ್ಷ ದೀಕ್ಷಾ’ ಉದ್ಘಾಟಿಸಿ ಅವರು ಮಾತನಾಡಿದರು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಂಸ್ಕೃತಿ, ಸಂಸ್ಕಾರ ಉಳಿದು, ಬೆಳೆಯಬೇಕಾದರೆ ಯಕ್ಷಗಾನವನ್ನು ವಿದ್ಯಾರ್ಥಿಗಳು ಕಲಿಯಬೇಕಾಗಿದೆ. ಅಕಾಡೆಮಿಯಿಂದ ಸಂಪೂರ್ಣ ಸಹಾಯ, ಸಹಕಾರ ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಾಪೋಷಕ ವಾಸುದೇವ ಐತಾಳ್, ಕಲಾಪೋಷಕ ಆನಂದ ಹಾಸ್ಯಗಾರ ಮಾತನಾಡಿದರು.
ಮುಖ್ಯಾಧ್ಯಾಪಕರಾದ ಎಸ್.ಎಂ.ಹೆಗಡೆ, ಎಲ್.ಎಂ. ಹೆಗಡೆ, ರವಿ ಪೂಜಾರಿ, ಗಣೇಶ ಯಾಜಿ ಮಾವಿನಕೆರೆ, ಶ್ರೀಧರ ಗೌಡ, ಶ್ರೀಧರ ಮರಾಠಿ, ವಿ.ಎಚ್. ನಾಯ್ಕ, ಶೈಲಾ ಭಟ್ಟ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಶಿವಾನಂದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಕಾಶ ನಾಯ್ಕ ನಿರ್ವಹಿಸಿದರು.