Video| ದೇವರ ಹೆಸರಲ್ಲಿ ಬೆತ್ತಲೆ ಸೇವೆ! ನಡುರಸ್ತೆಯಲ್ಲಿ ಬೆತ್ತಲೆ ಮಹಿಳೆಯ ಮೆರವಣಿಗೆ...

bettale seve
Published on

ಯಾದಗಿರಿ: ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಿದೆ ಈ ಘಟನೆ. ಸುರಪುರದಲ್ಲಿ ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಂಗಳವಾರ ಬೆತ್ತಲೆ ಮಹಿಳೆಗೆ ಸೊಪ್ಪುಕಟ್ಟಿ ನಡುಬೀದಿಯಲ್ಲಿ ಮೆರವಣಿಗೆ ಮಾಡಲಾಗಿದೆ. ದೇವರ ಹೆಸರಲ್ಲಿ ಬೆತ್ತಲೆ ಸೇವೆ ಆಚರಣೆಗೆ ಯಾದಗಿರಿ ಜಿಲ್ಲೆಯಲ್ಲಿ ಬಹುತೇಕ ಕಡೆ ಚಾಲ್ತಿಯಲ್ಲಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ಜಗತ್ತು ಆಧುನಿಕತೆ ಒಗ್ಗಿಕೊಂಡಿದ್ದು, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಜನತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ನಡುವೆ ಅನಿಷ್ಠ ಪದ್ಧತಿ, ಮೂಢನಂಬಿಕೆಯ ಬೇರು ಇನ್ನೂ ಹಾಗೆ ಇರುವುದು ವಿಪರ್ಯಾಸ. ದೇವರ ಹೆಸರಲ್ಲಿ ಹೆಣ್ಣಿಗೆ ಏಕೆ ಬೆತ್ತಲೆ ಸೇವೆಯ ಶಿಕ್ಷೆ ಕೊಡಲಾಗುತ್ತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

(ಬೆತ್ತಲೆ ಸೇವೆ ಮೆರವಣಿಗೆಯ ದೃಶ್ಯಕ್ಕಾಗಿ ಕೆಳಗೆ ಕೊಟ್ಟಿರುವ ವಿಜಯವಾಣಿ ಟ್ವಿಟರ್ ಲಿಂಕ್​ ಕ್ಲಿಕ್​ ಮಾಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net