ಮೇಲ್ವಿಚಾರಕರ ಕೊರತೆ ಪರಿಹರಿಸಲು ಆಗ್ರಹ

Superintendent, Sindagi, Alamela, Devarahipparagi, Awareness Centre, Ramu Agni, Library,
ಸಿಂದಗಿ ತಾಪಂ ಇಒ ರಾಮು ಅಗ್ನಿ ಅವರಿಗೆ ಗ್ರಾಪಂಗಳ ಮೇಲ್ಚಿಚಾರಕರ ಕುಂದು-ಕೊರತೆ ಪರಿಹರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಶಿವಶಂಕರ ಉಕುಮನಾಳ, ಗುರು ಹಿರೇಮಠ, ಸಂತೋಷ ಭಜಂತ್ರಿ ಇತರರಿದ್ದರು.
Published on

ಸಿಂದಗಿ: ಆಲಮೇಲ, ದೇವರಹಿಪ್ಪರಗಿ ಹಾಗೂ ಸಿಂದಗಿ ತಾಲೂಕುಗಳಲ್ಲಿನ ಅರಿವು ಕೇಂದ್ರ, ಗ್ರಾಪಂಗಳ ಮೇಲ್ವಿಚಾರಕರ ಕುಂದು-ಕೊರತೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಗುರುವಾರ ಮೇಲ್ವಿಚಾಕರು ತಾಪಂ ಇಒ ರಾಮು ಅಗ್ನಿ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಪಂ ವ್ಯಾಪ್ತಿಗಳಲ್ಲಿನ ಕೆಲವು ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಲಾಗಿದ್ದರೂ ಕಂಪ್ಯೂಟರ್, ಇಂಟರ್‌ನೆಟ್ ಸೇವೆ ಒದಗಿಸಿಲ್ಲ. ಅಲ್ಲದೆ ಸ್ಪರ್ಧಾತ್ಮಕ ಪುಸ್ತಕಗಳನ್ನು ನೀಡಿಲ್ಲ. ಕೂಡಲೇ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಗ್ರಂಥಾಲಯಗಳ ಮೇಲ್ವಿಚಾರಕರು, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ವೇತನ ತಾರತಮ್ಯ, ಬಾಕಿ ವೇತನ ವಿಳಂಬ, ಸಾದಿಲ್ವಾರ ಮತ್ತು ಪತ್ರಿಕೆಗಳ ಬಿಲ್ ನೀಡುತ್ತಿಲ್ಲ. ಈ ಕುರಿತು ಕೂಡಲೇ ಸರ್ಕಾರ ಮತ್ತು ಅಧಿಕಾರಿಗಳು ಗಮನ ಹರಿಸಿ ತಮ್ಮ ಕುಂದು-ಕೊರತೆಯನ್ನು ಅಲಿಸಿ ಪರಿಹರಿಸಬೇಕು ಎಂದು ಮನವಿ ಮಾಡಿದರು.

ಗ್ರಂಥಾಲಯಗಳ ಮೇಲ್ವಿಚಾರಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ ಉಕುಮನಾಳ, ಅಖಂಡ ಸಿಂದಗಿ ತಾಲೂಕಿನ ಗೌರವಾಧ್ಯಕ್ಷ ಗುರು ಹಿರೇಮಠ, ತಾಲೂಕು ಅಧ್ಯಕ್ಷ ಸಂತೋಷ ಭಜಂತ್ರಿ, ಕಾರ್ಯದರ್ಶಿ ಶಂಕರ ಅಗಸರ, ಭೀಮಸಿಂಗ್ ರಾಠೋಡ, ಲಕ್ಷ್ಮಣ ಪೊದ್ದಾರ, ಗೌಡಪ್ಪ ಬಿರಾದಾರ, ಮಲ್ಲಯ್ಯ ಮಠ, ಪಿ.ಬಿ.ಬೋಗುಂಡಿ, ಎಸ್.ಎಸ್.ಪಾತ್ರೋಟ, ಎಂ.ಎನ್.ಕುರಿಕಾಯಿ, ನಿಂಗಣ್ಣ ಯಳಮೇಲಿ, ಎಸ್.ಎಸ್.ಯತ್ನಾಳ, ಎಂ.ವೈ.ಬನಸೋಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net