ಎರಡು ದಿನ ಸೂಪರ್​ ಮೂನ್​ ದರ್ಶನ

UDP-16-4-Moon
Published on

ಭೂಮಿಗೆ ಸಮೀಪದಲ್ಲಿ ಚಂದ್ರ ಗೋಚರ | ಮಂಗಳವಾರ ರಾತ್ರಿ ಆಕಾಶದಲ್ಲಿ ಅಚ್ಚರಿ

ಉಡುಪಿ: ಭಾದ್ರಪದದ ಹುಣ್ಣಿಮೆಯಂದು (ಸೆ.17, 18) ಸೂಪರ್​ ಮೂನ್​ ದರ್ಶನವಾಗಲಿದ್ದು, ಇದು ಈ ವರ್ಷದ ಸುಂದರ ಹುಣ್ಣಿಮೆಯಾಗಿದೆ. ಮಂಗಳವಾರ ರಾತ್ರಿ (ಬುಧವಾರ ರಾತ್ರಿ ಸ್ವಲ್ಪ ಕಾಲ) ಹುಣ್ಣಿಮೆಯ ಬೆಳ್ಳಂಬೆಳದಿಂಗಳು ಹಾಲು ಚೆಲ್ಲಿದಂತೆ ಗೋಚರಿಸಲಿದೆ.

ಈ ವರ್ಷದ ನಾಲ್ಕು ಸೂಪರ್​ ಮೂನ್​ ಹುಣ್ಣಿಮೆಗಳಲ್ಲಿ ಸೆಪ್ಟೆಂಬರ್​ ತಿಂಗಳಿನ ಸೂಪರ್​ ಮೂನ್​ ಹುಣ್ಣಿಮೆ ಭವ್ಯವಾದುದಾಗಿದೆ. ಈ ಬಾರಿ ಚಂದ್ರನು ಭೂಮಿಗೆ ಅತಿ ಸಮೀಪದಲ್ಲಿ ಗೋಚರಿಸಲಿದ್ದಾನೆ.

UDP-16-4B-Moon

ಭೂಮಿಗೆ 3 ಲಕ್ಷ 57 ಸಾವಿರದ 485 ಕಿಮೀಗೆ ಬಂದು ದೊಡ್ಡದಾಗಿ ಹಾಗೂ ಹೆಚ್ಚಿನ ಪ್ರಭೆಯಲ್ಲಿ ಗೋಚರಿಸುವನು. ಇದು ಈ ವರ್ಷದಲ್ಲೇ ಅತಿ ಸಮೀಪ (ದೂರ)ದಲ್ಲಿ ಚಂದ್ರನು ಕಾಣಲಿದ್ದಾನೆ ಎಂದು ಉಡುಪಿಯ ಭೌತಶಾಸ್ತ್ರಜ್ಞ ಡಾ. ಎ.ಪಿ. ಭಟ್​ ಮಾಹಿತಿ ನೀಡಿದ್ದಾರೆ.

ಉಡುಪಿಯಲ್ಲಿ ವೀಕ್ಷಣೆಗೆ ಅವಕಾಶ

UDP-16-4A-Moon

ಹುಣ್ಣಿಮೆಯಂದು ಬೃಹದಾಕಾರದಲ್ಲಿ ಗೋಚರಿಸುವ ಚಂದ್ರನನ್ನು ಇನ್ನೂ ಹತ್ತಿರದಲ್ಲಿ ನೋಡಲು ಇತ್ತೀಚೆಗೆ ದೂರದರ್ಶಕ ಆವಿಷ್ಕರಿಸಿ ವಿಶ್ವ ದಾಖಲೆ ಮಾಡಿರುವ ಆರ್​.ಮನೋಹರ್​ ಅವಕಾಶ ಕಲ್ಪಿಸಿದ್ದಾರೆ. ಉಡುಪಿ ಪರ್ಕಳದ ಪಾಟೀಲ್​ ವಸ್ತ್ರ ಮಳಿಗೆಯ ಬಳಿ ಸೆ.18ರಂದು ಸಂಜೆ 5:30 ರಿಂದ ರಾತ್ರಿ 8:30ರ ತನಕ ದೂರದರ್ಶಕದ ಮೂಲಕ ಉಚಿತವಾಗಿ ಸೂಪರ್​ ಮೂನ್​ ವೀಕ್ಷಿಸಬಹುದಾಗಿದೆ. ಖಗೋಳ ಆಸಕ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾಹಿತಿಗಾಗಿ ಮೊ.ಸಂ. 9845690278 ಸಂಪರ್ಕಿಸಬಹುದು ಎಂದು ಸಂಘಟಕ ಗಣೇಶ್​ ರಾಜ್​ ಸರಳೆಬೆಟ್ಟು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net