ಸೂಪರ್ ಕಿಂಗ್ಸ್ ತಂಡಕ್ಕೆ ಜಯ

27mnv01
Published on

ಮಾನ್ವಿ: ರಾಜಾ ಅಂಬಣ್ಣನಾಯಕ ದೊರೆ ಫೌಂಡೇಷನ್‌ನಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣಾರ್ಥ
ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮಾನ್ವಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಲ್ಸ್ ತಂಡವನ್ನು ಮಣಿಸಿ ಸೂಪರ್ ಕಿಂಗ್ಸ್ ತಂಡ ಗೆಲುವು ದಾಖಲಿಸಿದೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅರುಣಕುಮಾರ ನೇತೃತ್ವದ ಸೂಪರ್ ಕಿಂಗ್ಸ್ ತಂಡ 12 ಓವರಗಳಲ್ಲಿ 121 ರನ್ ಬಾರಿಸಿತು. ಎಂ.ಡಿ.ಆಲಂ ನೇತೃತ್ವದ ರಾಯಲ್ಸ್ ತಂಡ 12 ಓವರಗಳಲ್ಲಿ 7 ವಿಕೆಟ್ ಕಳೆದುಕೊಂಡು 116 ರನ್ ಗಳಿಸಲು ಶಕ್ತವಾಯಿತು. ವಿಜೇತ ಸೂಪರ್ ಕಿಂಗ್ಸ್ ತಂಡಕ್ಕೆ 1 ಲಕ್ಷ ರೂ. ಬಹುಮಾನ ಮತ್ತು ಟ್ರೋಫಿಯನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ವಿತರಣೆ ಮಾಡಿದರು. ಫೈನಲ್‌ನಲ್ಲಿ ಪರಾಜಿತ ರಾಯಲ್ಸ್ ತಂಡಕ್ಕೆ ಎಸ್.ಆರ್.ಡೆವಲಪರ್ ಮಾಲೀಕ ಸೂರಿಬಾಬು 50 ಸಾವಿರ ರೂ. ಮತ್ತು ಟ್ರೋಫಿ ನೀಡಿದರು.

ಕ್ರಿಕೆಟ್ ಸೇರಿ ಇನ್ನಿತ ಕ್ರೀಡೆಗಳು ಹಾಗೂ ಕ್ರೀಡಾಪಟುಗಳಿಗೆ ನಿರಂತರ ಉತ್ತೇಜನ ನೀಡುವುದಾಗಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಪ್ರಮುಖರಾದ ಹನುಮಂತ ಭೋವಿ, ಶಿವರಾಜನಾಯಕ, ಇಬ್ರಾಹಿಂ ಖುರೇಶಿ, ಶರಣಪ್ಪ ಮೇದಾ, ಪಿ.ರವಿಕುಮಾರ, ರಹೆಮತ್ ಅಲಿ, ಸುಭಾನ್ ಬೇಗ್, ಅರುಣಕುಮಾರ ಬಲ್ಲಟಗಿ, ಗಿರಿನಾಯಕ, ಶರಣಬಸವ ಭೋಗಾವತಿ, ಮಹಾಂತೇಶ ಭೋಗಾವತಿ, ಮುಜ್ಜುಪಟೇಲ್, ಸಂತೋಷಕುಮಾರ, ನರಸಿಂಹ, ಜಿಲಾನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net