ರೂಬಿಗೆ ಶ್ರೇಷ್ಠತಮ ಮಾನವೀಯ ಪ್ರಶಸ್ತಿ

Rubin moses
Published on

ಚಿಕ್ಕಮಗಳೂರು: ನವದೆಹಲಿಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾದ ಐಕಾನ್ ಫೌಂಡೇಷನ್ ತನ್ನ 2020ನೇ ಸಾಲಿನ ಸಂಸ್ಥೆಯ ಅತ್ಯುನ್ನತ ಪ್ರಶಸ್ತಿಯಾದ ಶ್ರೇಷ್ಠತಮ ಮಾನವೀಯ ಪ್ರಶಸ್ತಿಗೆ ನಗರದ ಗೌರಿಕಾಲುವೆಯ ಸರ್ವಧರ್ಮ ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ, ಸಮಾಜ ಸೇವಾ ಕಾರ್ಯಕರ್ತ ಹಾಗೂ ನಗರಸಭೆ ಮಾಜಿ ಸದಸ್ಯ ರೂಬೆನ್ ಮೋಸೆಸ್ ಅವರನ್ನು ಆಯ್ಕೆ ಮಾಡಿದೆ.

ಡಿ.20ರಂದು ನವದೆಹಲಿಯ ಕನಾಟ್ ಪ್ಲೇಸ್‍ನಲ್ಲಿರುವ ಲೀ ಮೆರಡಿಯನ್ ಹೋಟೆಲ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net