ಸುಂಟಿಕೊಪ್ಪ ಕೃಷಿ ಸಂಘಕ್ಕೆ 58 ಲಕ್ಷ ರೂ.ಲಾಭ

22sunti01...
ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಮತ್ತು ಸದಸ್ಯರು ಪಾಲ್ಗೊಂಡಿದ್ದರು.
Published on

ಸುಂಟಿಕೊಪ್ಪ: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 58, 05, 398 ರೂ. ನಿವ್ವಳ ಲಾಭ ಗಳಿಸಿದೆ.

ಸೋಮವಾರ ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೆರ್ಮಿ ಡಿಸೋಜ ಸಂಘದ ಸದಸ್ಯರಿಗೆ 2024-25 ನೇ ಸಾಲಿನಲ್ಲಿ ಶೇ.13 ರಷ್ಟು ಡಿವಿಡೆಟ್ ನೀಡಲು ತೀರ್ಮಾನಿಸಲಾಗಿದೆ ಸಂಘದ ಸಾಲ ಮರುಪಾವತಿ ಪ್ರಮಾಣವು ಶೇ.98.2 ಇದ್ದು, ಸರಕಾರದ ಬಡ್ಡಿ ರಿಯಾಯಿತಿ ಯೋಜನೆಯು ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ವರದಿಯಾಗಿರುವಂತೆ ಸಂಘದಲ್ಲಿ ಆಗಿರುವ ಹಣ ದುರುಪಯೋಗದ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಹಿರಿಯ ಸದಸ್ಯ ಎಂ.ಎ.ವಸಂತ ಪ್ರಶ್ನಿಸಿದಾಗ, ಅಧ್ಯಕ್ಷ ಜೆರ್ಮಿ ಡಿಸೋಜ ಪ್ರತಿಕ್ರಿಯಿಸಿ, ಈಗಾಗಲೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ಕಾಲ ಕಾಲಕ್ಕೆ ವಿಚಾರಣೆ ನಡೆಯುತ್ತಿದೆ. ಸಂಘದ ವತಿಯಿಂದ ಕ್ರಮ ವಹಿಸಲಾಗಿದೆ ಎಂದರು.

ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರಾಗಿರುವ ದಾಸಂಡ ರಮೇಶ್ ಚಂಗಪ್ಪ ಮಾತನಾಡಿ, ಒಂದು ಪ್ರಕರಣ ರಾಜ್ಯ ಉಚ್ಚನ್ಯಾಯಾಲಯದಲ್ಲಿದ್ದು, ಇನ್ನೊಂದು ಮೊಕದ್ದಮೆಯು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

ಕಳೆದ ಮಹಾಸಭೆಯಲ್ಲೂ ಕೂಡ ಸಂಘದ ಸಿಇಒ ಹುದ್ದೆ ಖಾಲಿ ಇದ್ದು, ಇದರ ಬಗ್ಗೆ ಪ್ರಗತಿ ಏನಾಗಿದೆ ಎಂದು ಹಿರಿಯ ಸದಸ್ಯರಾದ ಕೆ.ಡಿ.ರಾಮಯ್ಯ ಮತ್ತು ಎಂ.ಎ.ವಸಂತ ಪ್ರಶ್ನಿಸಿದು. ಈಗಾಗಲೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಇನ್ನೂ 2 ಹುದ್ದೆಗಳು ಖಾಲಿಯಿದ್ದು, ಸರ್ಕಾರದ ಮಟ್ಟದಲ್ಲಿ ಹುದ್ದೆ ಭರ್ತಿಗೆ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಅಧ್ಯಕ್ಷ ಜೆರ್ಮಿ ಡಿಸೋಜ ಮಾಹಿತಿ ನೀಡಿದರು.

ವಾರ್ಷಿಕ ಮಹಾಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

2024-235ನೇ ಸಾಲಿನಲ್ಲಿ ಮೃತಪಟ್ಟ ಸದಸ್ಯರುಗಳಿಗೆ 2 ನಿಮೀಷ ಮೌನ ಆಚರಿಸಲಾಯಿತು. ಉಪಾಧ್ಯಕ್ಷ ಪಿ.ಪಿ.ಉದಯಕುಮಾರ್, ನಿರ್ದೇಶಕರಾದ ಎಂ.ಎನ್.ಕುಮಾರಪ್ಪ, ಎನ್.ಸಿಪೊನ್ನಪ್ಪ, ಡಿ.ಕೆ.ಗಂಗಾಧರ, ಡಾ.ಶಶಿಕಾಂತ ರೈ, ಕೆ.ಪಿ.ಜಗನ್ನಾಥ್, ಕೆ.ಆರ್.ಮಂಜುನಾಥ, ಬಿ.ಕೆ.ದಯಾನಂದ, ಪಿ.ಪಿ.ಲೀಲಾವತಿ, ಕೆ.ವಿ.ರಮ್ಯ, ಮತ್ತು ಪ್ರಭಾರ ಸಿಇಒ ಸುಮಿತ್ರಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net