

ಸುಂಟಿಕೊಪ್ಪ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಶ್ರಾವಣ ಮಾಸದ ಶುಕ್ರವಾರ ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮಿ ೀ ಹಬ್ಬವನ್ನು ಆಚರಿಸಲಾಯಿತು.
ಇಲ್ಲಿನ ಹಲವು ಮನೆಗಳಲ್ಲಿ ಸುಮಂಗಲಿಯರು ಮುಂಜಾನೆ ಮನೆಯನ್ನು ಶುಚಿಗೊಳಿಸಿ ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ, ಮಂಗಳ ಸ್ನಾನದ ನಂತರ ಮಡಿಯಲ್ಲಿ ಮನೆ ದೇವರಿಗೆ, ಮಹಾ ಲಕ್ಷ್ಮೀಗೆ ನೈವೇದ್ಯ ಸಿದ್ಧಪಡಿಸಿದ್ದು ಗಮನ ಸೆಯಿತು.
ತೆಂಗಿನ ಕಾಯಿ ಸಹಿತ ಕಳಸವನ್ನು ಅಕ್ಕಿ ತಟ್ಟೆಯಲ್ಲಿ ಪ್ರತಿಷ್ಠಾಪಿಸಿ, ಮಂಗಳ ದ್ರವ್ಯ ಮತ್ತು ಆಭರಣ, ನಗದು ಸಹಿತ ಸಿಂಗರಿಸಿ ದೇವಿ ಪೂಜೆ ಮಾಡಲಾಯಿತು. ನೆರೆಹೊರೆಯ ವನಿತೆಯರಿಗೆ ಮನೆಗೆ ಆಹ್ವಾನಿಸಿ, ಅರಿಸಿನ, ಕುಂಕುಮ, ಹೂವು ಸಹಿತ ಪ್ರಸಾದವನ್ನು ನೀಡಲಾಯಿತು. ಕೆಲವು ಮನೆಗಳಲ್ಲಿ ವರಮಹಾಲಕ್ಷ್ಮಿ ೀ ವ್ರತದ ಮುತ್ತೈದೆಯರಿಗೆ ಬಾಗಿನ ನೀಡಲಾಯಿತು. ಕೆಲ ಮನೆಗಳಲ್ಲಿ ಸಂಪ್ರದಾಯದಂತೆ ಅನ್ನದಾನವನ್ನೂ ಮಾಡಿದ್ದು ವಿಶೇಷವಾಗಿತ್ತು.