ರಚನಾತ್ಮಕ ಸಮಾಜ ಕಟ್ಟಲು ಮುಂದಾಗೋಣ

16sunti01
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 76.0; hist255: 0.0; hist252~255: 0.0; hist0~15: 0.0;
Published on

ಸುಂಟಿಕೊಪ್ಪ: ರಚನಾತ್ಮಕ ಸಮಾಜ ಕಟ್ಟಲು ಮುಂದಾಗೋಣ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.
ಗದ್ದೆಹಳ್ಳದ ಎಸ್‌ಎಸ್ ಇಂಟರ್ ನ್ಯಾಷಲ್ ಸಭಾಂಗಣದಲ್ಲಿ ಗುರುವಾರ ಎಸ್‌ವೈಎಸ್ ಜಿಲ್ಲಾ ಶಾಖಾ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಉಳ್ಳವರು ಇಲ್ಲದಿರುವವರ ಬಗ್ಗೆ ಸಹಾಯ ಮಾಡುವ ಮನೋಭಾವ ಹೆಚ್ಚು ಹೊಂದಬೇಕೆಂದು ಸಲಹೆ ನೀಡಿದರು. ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಯಾವುದೇ ಜಾತಿ, ಧರ್ಮ, ಜನಾಂಗಕ್ಕೆ ಸೇರಿದ ನಾವು ಮೊದಲು ಭಾರತೀಯರಾಗೋಣ ಎಂದರು.
ಯಾರನ್ನು ನೋಯಿಸದೆ ಪರಸ್ಪರ ಪ್ರೀತಿ ಸಹನೆಯಿಂದ ಬದುಕು ಸಾಗುವಲ್ಲಿ ಎಲ್ಲ ಧರ್ಮಗಳ ತಿರುಳೂ ಒಂದೇ ಎಂದರು. ಇಮಾನ್ಯುವೆಲ್ ಚರ್ಚಿನ ಧರ್ಮಗುರು ಮಧುಕಿರಣ್ ಮಾತನಾಡಿ, ಭಾರತೀಯರಾದ ನಾವು ಮಾನವೀಯ ಧರ್ಮದಲ್ಲಿ ನಡೆಯೋಣ. ಎಲ್ಲರೂ ಒಂದಾಗಿ ದೇಶವನ್ನು ಮುನ್ನಡೆಸೋಣ ಎಂದರು.
ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಸ್‌ಕೌಸರಿ ಮಾತನಾಡಿ ಅಶಾಂತಿ ಮತ್ತು ಆಸಹನೆ ತೊರೆದು ದೇಶದ ಸಾತ್ವಿಕ ವಿಚಾರಗಳತ್ತ ಯುವ ಜನರು ಗಮನ ಹರಿಸಬೇಕು ಎಂದರು.
ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷರಾದ ಸಿ.ಪಿ.ಎಂ.ಬಶೀರ್ ಹಾಜಿ ವಿಟ್ಲದ ಮಾಜಿ ಶಾಸಕ ಕೆ.ಎ.ಇಬ್ರಾಹಿಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಶೈಖುನಾ ಎಂ.ಎಂ.ಅಬ್ಧುಲ್ಲಾ ಫೈಝಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net