ಸುಂದರ್ ರಾಜ್ ಮೈಸೂರಿಗೆ ವರ್ಗಾ

Sundar raj
Published on

ಮಡಿಕೇರಿ:

ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಂದರ್ ರಾಜ್ ಅವರನ್ನು ಸರ್ಕಾರ ವರ್ಗಾ ಮಾಡಿದೆ. ಸುಂದರ್ ರಾಜ್ ಅವರನ್ನು ಮೈಸೂರಿನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಿ ಪೊಲೀಸ್ ಸೇವೆಗಳ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಧನಂಜಯ ಆದೇಶಿಸಿದ್ದಾರೆ. ವಿ.ಎಸ್. ಜಾಹ್ನವಿ ಅವರ ಜಾಗಕ್ಕೆ ಸುಂದರ್ ರಾಜ್ ಅವರನ್ನು ವರ್ಗಾ ಮಾಡಲಾಗಿದ್ದು, ಜಾಹ್ನವಿ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ. ಸುಂದರ್ ರಾಜ್ ಜಾಗಕ್ಕೂ ಯಾರನ್ನು ಕೂಡ ನೇಮಕ ಮಾಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net