ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ಸನ್ಮಾನ

Sunkasal-High school-student
Published on

ಅಂಕೋಲಾ : ತಾಲೂಕಿನ ಸುಂಕಸಾಳ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಪ್ರಕಾಶ ಸೀತಾರಾಮ ಗೌಡ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟದಲ್ಲಿ ಹೈಜಂಪ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು, ಬೆಳ್ಳಿ ಪದಕ ವಿಜೇತರಾಗಿ, ಡಿ.20 ರಂದು ಶಿಮ್ಲಾದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.
ಸುಂಕಸಾಳ ಸರ್ಕಾರಿ ಪ್ರೌಢ ಶಾಲೆಯ ಮತ್ತು ಶಾಲಾಡಳಿತ ಮಂಡಳಿಯ ವತಿಯಿಂದ ಬುಧವಾರ ಶಾಲೆಯ ಸಭಾಭವನದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ವಿದ್ಯಾರ್ಥಿ ಪ್ರಕಾಶ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಿಇಓ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿ, ಇಷ್ಟಪಟ್ಟು ಶ್ರಮ ಪಟ್ಟರೆ ಸಾಧಿಸಲು ಯಾವದೂ ಕಷ್ಟ ವಲ್ಲ. ಪ್ರಕಾಶ ಗೌಡ ಸಾಧನೆ ತಾಲೂಕಿಗೆ ಹೆಮ್ಮೆ ತಂದಿದೆ. ಇಂತಹ ಗ್ರಾಮೀಣ ಪ್ರತಿಭೆಗಳನ್ನು ಪೌಷ್ಠಿಕ ಆಹಾರ ಮತ್ತು ಸೂಕ್ತ ತರಬೇತಿಯೂ ಅವಶ್ಯ. ಇಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಆದರೆ ಕ್ರೀಡಾ ತರಬೇತಿ ಶಾಲೆ ಗಳು ದೂರದಲ್ಲಿರುವರಿಂದ ಇಲ್ಲಿನ ಪಾಲಕರು ತಮ್ಮ ಮಕ್ಕಳನ್ನು ಅಲ್ಲಿ ಸೇರಿಸಲು ಒಪ್ಪುತ್ತಿಲ್ಲ. ಆದರೂ ಕೇವಲ ಶಿಕ್ಷಣವೇ ಅಂತಿಮವಾಗದೆ ಸಾಂಸ್ಕೃತಿಕ ಮತ್ತು ಕ್ರೀಡಾಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡೋಣ. ಮೆಟ್ರಿಕೆ ಪರೀಕ್ಷೆಯಲ್ಲೂ ಶೇ.100 ಫಲಿತಾಂಶ ಸಾಧನೆ ಮಾಡಲಿ ಹಾರೈಸಿದರು.
ಸುಂಕಸಾಳ ಗ್ರಾಪಂ.ಅಧ್ಯಕ್ಷೆ ರಮೀಜಾ ಸಯ್ಯದ್ ಮಾತನಾಡಿ, ಅದ್ಬುತ ಕ್ರೀಡಾ ಪ್ರತಿಭೆ ಪ್ರಕಾಶ ಸೀತಾರಾಮ ಗೌಡ ಈತನ ಕ್ರೀಡಾ ಸಾಧನೆಯಿಂದ ಈ ಶಾಲೆಯು ತಾಲೂಕಿನಲ್ಲೇ ಗುರುತಿಸುವಂತಾಗಿದ್ದು, ಸಂತಸ ತಂದಿದೆ. ಸಾಧನೆಗೆ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಬಹುದು. ಇಂತಹ ಪ್ರತಿಭೆಗಳಿಗೆ ಗ್ರಾಪಂ.ಮೂಲಕ ಸಕಲ ಸಹಾಯ ಮಾಡಲಾಗುವುದು. ಈತನ ಮುಂದಿನ ಪಯಣಕ್ಕೆ ಎಲ್ಲರೂ ಸಹಾಯ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಕಾಶ ಗೌಡ ಅವರ ತಂದೆ ಸೀತಾರಾಮ ಗೌಡ, ತಾಯಿ ನಾಗವೇಣಿ ಗೌಡ, ಹೆಬ್ಬುಳ ಗ್ರಾಪಮ.ಸದಸ್ಯ ಪ್ರವೀಣ ನಾಯರ, ಶಾಲೆಯ ಎಸ್‌ಡಿಎಂ ಅಧ್ಯಕ್ಷ ಶಿವಾನಂದ ನಾಯಕ, ಉಪಾಧ್ಯಕ್ಷ ಮಂಜುನಾಥ ನಾಯ್ಕ, ಬಿಆರ್‌ಸಿ ರಾಘು, ಮುಖ್ಯಾಧ್ಯಾಪಕಿ ಇಂದಿರಾ ಹಾರವಾಡೇಕರ, ಶಿಕ್ಷಕಿ ಶೋಭಾ ಆರ್. ನಾಯಕ ಪ್ರಕಾಶ ಗೌಡ ಅವರ ಕೀಡಾ ಸಾಧನೆಯನ್ನು ಪರಿಚಯಿಸಿದರು. ಶಿಕ್ಷಕಿ ಬೇಬಿ ನಾಯಕ, ತೇಜಸ್ವಿನಿ ನಾಯಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net