

ಕುಳಗೇರಿ ಕ್ರಾಸ್: ನವಿಲುತಿರ್ಥ ಜಲಾಶಯದಿಂದ 5,594 ಕ್ಯೂಸೆಕ್ ನೀರು ಮಲಪ್ರಭೆ ಬಿಟ್ಟಿದ್ದರಿಂದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಪರ್ಕದ ಹಳೇ ಸೇತುವೆ ಮೇಲೆ ನೀರು ಹರಿಯುತ್ತಿದೆ.
ಪೊಲೀಸ್ ಸಿಬ್ಬಂದಿ ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಮುಳ್ಳು-ಕಂಟಿ ಬೇಲಿ ಹಾಕಿದ್ದಾರೆ. ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಸ್ ಸೇರಿ ಬಹುತೇಕ ವಾಹನಗಳು ಹೊಸ ಸೇತುವೆ ಮೂಲಕ ಸಂಚರಿಸುತ್ತಿವೆ.
ಪಿಡಿಒ ಎಸ್ ಎನ್ ತೋಟರ, ಪೊಲೀಸ್ ಸಿಬ್ಬಂದಿ ಆರ್ ಎಸ್ ಬೀರಾದಾರ, ಆರ್ ಎಂ ಮರೆನ್ನವರ, ಮಂಜು ಉಪ್ಪಾರ, ಗ್ರಾಪಂ ಸಿಬ್ಬಂದಿ ಯಲ್ಲಪ್ಪ ಚಿನ್ನಕ್ಕನವರ ಇದ್ದರು.