ಮುಳುಗಿದ ಹೆಬ್ಬಾಳೆ ಸೇತುವೆ

16kls1 (2)
ಹೊರನಾಡು ಮುಂಡುಗದ ಮನೆಗೆ ಹೋಗುವ ರಸ್ತೆಗೆ ಧರೆ ಕುಸಿದಿರುವುದು.
Published on

ಕಳಸ: ಕಳಸ ತಾಲೂಕಿನಾದ್ಯಂತ ಸೋಮವಾರದಿಂದ ಮಳೆ ಅಬ್ಬರ ಹೆಚ್ಚಾಗಿದ್ದು , ಕೆಲವೆಡೆ ಭೂ ಕುಸಿತವಾಗಿ ಜನ ತೊಂದರೆ ಅನುಭವಿಸಿದ್ದಾರೆ.
ಕಳಸದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೆ 110.6 ಮಿ.ಮಿ ಮಳೆಯಾಗಿದೆ. ಸೋಮವಾರ ಸಂಜೆಯಿಂದ ಮಳೆ ಪ್ರಮಾಣ ಹೆಚ್ಚಾಗಿದ್ದು, ಕಳಸ-ಹೊರನಾಡು ನಡುವಿನ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಕೆಲ ಕಾಲ ಮುಳುಗಿತ್ತು. ಹೊರನಾಡಿಗೆ ಹೋಗುವ ಪ್ರವಾಸಿಗರು ಮತ್ತು ಸ್ಥಳೀಯರು ಬದಲಿ ಹಳುವಳ್ಳಿ ಮಾರ್ಗ ಬಳಸಿಕೊಂಡರು.
ಇಡಕಣಿ ಗ್ರಾಪಂ ವ್ಯಾಪ್ತಿಯ ಹಿರೇಬೈಲ್ ಹೆಮ್ಮಕ್ಕಿ ರಸ್ತೆಯ ಕಂಕೋಡ್ ಹತ್ತಿರ ಧರೆ ಕುಸಿದಿದೆ. ಮರಸಣಿಗೆ ಗ್ರಾಪಂ ವ್ಯಾಪ್ತಿಯ ಮೈದಾಡಿಯಿಂದ ಮೇಲ್ಗುಳ್ಳಿಗೆ ತೆರಳುವ ರಸ್ತೆ ಬದಿ ಮರ ಹಾಗೂ ಧರೆ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಗ್ರಾಪಂನಿಂದ ಮರ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಹೊರನಾಡು ಗ್ರಾಮದ ಮುಂಡುಗದ ಮನೆ ರಸ್ತೆ ಬದಿ ಭೂ ಕುಸಿತವಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ಹೊರನಾಡು ಪಂಚಾಯಿತಿಯಿಂದ ಮಣ್ಣನ್ನು ತೆರವು ಮಾಡಲಾಯಿತು. ಮುಂಜಾಗೃತಾ ಕ್ರಮವಾಗಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net