ಚನ್ನಂಗೆರೆ ಗ್ರಾಪಂಗೆ ಸುನೀತಾ ದಿನೇಶ್ ಅಧ್ಯಕ್ಷೆ

IMG-20250502-WA0139
ಚನ್ನಂಗೆರೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಸುನಿತಾದಿನೇಶ್ ಆಯ್ಕೆಯಾದರು.
Published on

 ಸಾಲಿಗ್ರಾಮ: ತಾಲೂಕಿನ ಚನ್ನಂಗೆರೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತೆ ಸುನೀತಾ ದಿನೇಶ್ ಆಯ್ಕೆಯಾದರು.

ಒಟ್ಟು 17 ಜನ ಸದಸ್ಯರಿರುವ ಚನ್ನಂಗೆರೆ ಗ್ರಾಮ ಪಂಚಾಯಿತಿಯಲ್ಲಿ ಅನಿತಾ ಕಾಂತರಾಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಮಣಿ ಅಂಬರೀಶ್ ಮತ್ತು ಸುನಿತಾ ದಿನೇಶ್ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಸುನಿತಾ ದಿನೇಶ್ 12 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಮಣಿ ಅಂಬರೀಶ್ 5 ಮತ ಪಡೆದು ಪರಾಭವಗೊಂಡರು. ಚುನಾವಣಾ ಅಧಿಕಾರಿ ತೋಟಗಾರಿಕಾ ಇಲಾಖೆ ನಿರ್ದೇಶಕಿ ಭಾರತಿ ಕರ್ತವ್ಯ ನಿರ್ವಹಿಸಿದರು.

ಉಪಾಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಸುನೀತಾ ದಿನೇಶ್, ಸವಿತಾ ಕುಚಲ, ಅನಿತಾ ಕಾಂತರಾಜ್, ರತ್ನಮಣಿ, ಸೋಮಶೇಖರ್, ಚೈತ್ರರಘುನಾಯಕ, ಸುನಿತಾಯುವರಾಜ್, ಮಣಿಅಂಬರೀಶ್, ಮಾದಯ್ಯ, ರಾಜೇಶ್ವರಿಲೋಕೇಶ್, ಗಿರಿಜಾ ಪ್ರಕಾಶ್, ರವಿಕುಮಾರ್, ಅಶ್ವಥ್ ಕುಮಾರ್, ಶೀಲಾ, ಧನಲಕ್ಷ್ಮೀ ಶಿವರಾಜ್ ಮತ್ತು ರಾಮಚಂದ್ರ ಸೇರಿದಂತೆ 17 ಜನ ಹಾಜರಿದ್ದರು.

ಸಿಹಿ ಹಂಚಿ ಸಂಭ್ರಮ: ಸುನೀತಾ ದಿನೇಶ್ ಅವರು ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷೆ ಸುನೀತಾ ಮಾತನಾಡಿ, ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸುತ್ತೇನೆ. ವ್ಯಾಪ್ತಿಯ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಮುಖಂಡರಾದ ಮಲ್ಲಿಕಾರ್ಜುನ್, ತಿಮ್ಮೇಗೌಡ, ನಟರಾಜ್, ಬಾಬು, ಶಂಕರೇಗೌಡ, ಶಿವಮೂರ್ತಿ, ಗಂಗಾಧರ್, ಶೇಷಾದ್ರಿ, ಮಾಳಪ್ಪ, ಸುಂದರೇಗೌಡ, ರಘುನಾಥ್, ಗಂಗಾಧರ್, ರೇವಣ್ಣ, ಪ್ರಕಾಶ್, ಶಂಕರನಾಯಕ, ಕುಮಾರ್, ಮಲ್ಲೇಶ್, ಸತೀಶ್, ರಾಜು, ಮಂಜುನಾಥ್, ನಟೇಶ್, ರವಿ, ಶಿವಕುಮಾರ್, ಕುಮಾರ್, ನಾಗೇಂದ್ರ, ರಮೇಶ್, ನಿಂಗರಾಜೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net