

ಮುಂಡರಗಿ: ತಾಲೂಕಿನ ಶಿಂಗಟಾಲೂರು ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುನೀಲರಡ್ಡಿ ನೀರಲಗಿ ಹಾಗೂ ಉಪಾಧ್ಯಕ್ಷರಾಗಿ ಕೊಟ್ರವ್ವ ಸೂಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯೂ ಆದ ತಾಪಂ ಇಒ ವಿಶ್ವನಾಥ ಹೊಸಮನಿ ಘೋಷಿಸಿದರು.
ಸಂಭ್ರಮ: ನೂತನ ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧ ಆಯ್ಕೆಯಾದ ಹಿನ್ನೆಲೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮಿಸಿದರು. ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
ಆನಂದಗೌಡ ಪಾಟೀಲ, ಈಶ್ವರಗೌಡ ಪಾಟೀಲ, ಎಸ್.ಎಸ್. ಗಡ್ಡದ, ಬಸವರಾಜ ಬಿಳಿಮಗ್ಗದ, ಆರ್.ಎಂ. ತಪ್ಪಡಿ, ಪರಸಪ್ಪ ಮುಂಡವಾಡ, ಕಲವೀರಪ್ಪ ಭಜಂತ್ರಿ, ವಿಮಲಾ ರ‌್ಯಾವಣಕಿ, ಮಂಜವ್ವ ಅಂಗಡಿ, ಅಕ್ಕಮಹಾದೇವಿ ಮಲ್ಲಾಪೂರ, ಜಯಶ್ರೀ ಚಾಕಲಬ್ಬಿ, ರತ್ನವ್ವ ಪಾಟೀಲ, ಸುಮಿತ್ರಾ ಕಗ್ಗಲ್ಲವರ, ರುದ್ರಪ್ಪ ಹುಲವತ್ತಿ, ಗುಡದೀರಯ್ಯ ಹಿರೇಮಠ, ವೀರಣ್ಣ ಗುಂಡ್ಲೂರು, ರೇಣಕಪ್ಪ ಬೆಟ್ಟಣ್ಣವರ, ಅಂಜಪ್ಪ ತಳವಾರ, ರಾಮಸ್ವಾಮಿ ದೊಸಿಗೇರ, ಬಸವರಾಜ ಮುಂಡವಾಡ, ಕಾರ್ಯಪ್ಪ ಸೂಲಿ, ರಾಮಣ್ಣ ಹಳ್ಳಿಕೇರಿ, ಮಲ್ಲಪ್ಪ ಮಲ್ಲಿಕೇರಿ, ಬಸಣ್ಣ ಮಜ್ಜಿಗಿ, ಈರಣ್ಣ ರಡ್ಡೇರ, ಲಕ್ಷ್ಮಣ ಗಾಜಿ, ಪ್ರಶಾಂತ ಶೆಟ್ಟರ, ಮಹಾಂತೇಶ ತಳವಾರ, ಹನಮಂತ ಶಿರಹಟ್ಟಿ, ಈರಣ್ಣ ವಾಲಿ ಇತರರು ಇದ್ದರು.