

ಕೂಡಿಗೆ: ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್.ಸುನಿಲ್ ರಾವ್, ಉಪಾಧ್ಯಕ್ಷರಾಗಿ ತಮ್ಮಯ್ಯ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಧಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ, ಭಾನುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾ ಅಧಿಕಾರಿಯಾಗಿ, ಸಹಕಾರ ಸಂಘಗಳ ಅಧಿಕಾರಿಯಾದ ಪಿ.ಬಿ.ಮೋಹನ್ ಅವರು ಕಾರ್ಯನಿರ್ವಹಿಸಿದರು.
ಚುನಾವಣಾ ಪ್ರಕ್ರಿಯೆ ಮುಗಿದು, ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆಯ ನಂತರ ಮಾತನಾಡಿದ, ಎಸ್.ಆರ್.ಸುನಿಲ್ ರಾವ್, ಮುಂಬರುವ ದಿನಗಳಲ್ಲಿ ಸಂಘದ ಎಲ್ಲಾ ಸದಸ್ಯರ ಸಲಹೆ, ಸಹಕಾರಗಳೊಂದಿಗೆ ಮದಲಾಪುರ ಹಾಲು ಉತ್ಪಾದಕರ ಈ ಸಹಕಾರ ಸಂಘವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಜತೆಗೆ, ಗ್ರಾಮೀಣ ಜನತೆಗೆ ಅನುಕೂಲ ಒದಗಿಸುವ, ಮತ್ತು ಸಹಕಾರ ಸಂಘದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ವೆಂಕಟಯ್ಯ ನಾಯಕ, ಎಚ್.ಆರ್.ಕೃಷ್ಣ, ಸುರೇಶ್, ವಸಂತ, ಬಿ.ಎ.ಮಂಜುಳಾ, ಗಾಯತ್ರಿ, ಕೆ.ಕೆ.ಚಂದ್ರಿಕಾ, ದೇವಿರಮ್ಮ, ವೈ.ಆರ್.ಗಿರಿಜಾ ಹಾಗೂ ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಯೋಗೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಸ್.ಶಿವಕುಮಾರ್, ಅರುಣ್‌ರಾವ್, ಗ್ರಾಮದ ಪ್ರಮುಖರಾದ ಮಾದಪ್ಪ, ಬಾಪು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಹಲವು ಸದಸ್ಯರು ಇದ್ದರು.