ಕೊಡಗು ಚಲೋ ಯಾರ ವಿರುದ್ಧ?, ಸಿದ್ದರಾಮಯ್ಯಗೆ ಸಚಿವ ಸುನೀಲ್ ಪ್ರಶ್ನೆ

udp-sunilkumar
Published on

ಉಡುಪಿ: ಸಿದ್ದರಾಮಯ್ಯ ನಿರಂತರ ಸಮಾಜವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸ್ವಾತಂತ್ರೃ ಹೋರಾಟಗಾರರ ವಿರುದ್ಧ ಆವಹೇಳನಕಾರಿಯಾಗಿ ಮಾತನಾಡಿದಾಗ ರಾಜ್ಯದಲ್ಲಿ ಪ್ರತಿಭಟನೆ ಸಹಜ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಏರಿಯಾಗಳಲ್ಲಿ ಮಾತ್ರ ಓಡಾಡಿದರೆ ಪ್ರತಿಭಟನೆ ಇರದು. ಉಳಿದ ಏರಿಯಾಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಜನರು ಪ್ರತಿಭಟನೆ ಮಾಡುತ್ತಾರೆ. ವಿರೋಧವನ್ನು ಕೂಡ ಸಿದ್ದರಾಮಯ್ಯ ಗೌರವಪೂರ್ಣವಾಗಿ ಸ್ವೀಕರಿಸಬೇಕು. ಅವರ ನಡವಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರೇ ಬೇಸರಗೊಂಡಿದ್ದಾರೆ. ಮೊಟ್ಟೆ ಎಸೆದದ್ದು ಡಿ.ಕೆ.ಶಿವಕುಮಾರ್ ಬಣದವರೋ? ಪರಮೇಶ್ವರ್ ಬಣದವರೋ ಎಂಬುದನ್ನು ಕಾಂಗ್ರೆಸ್ ಆಂತರಿಕ ತನಿಖೆಯಿಂದ ತಿಳಿದುಕೊಳ್ಳಲಿ ಎಂದರು.

ವಿನಾಕಾರಣ ಬಿಜೆಪಿ ಮೇಲೆ ಆರೋಪ ಸರಿಯಲ್ಲ. ಕೊಡಗು ಚಲೋ ಯಾರ ವಿರುದ್ಧ ಎಂಬುದನ್ನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಮಳೆ, ನೆರೆ ಹಾನಿ ಸಂಭವಿಸಿ ಎಷ್ಟೋ ದಿನಗಳಾದ ಬಳಿಕ ನೆರೆಪೀಡಿತ ಪ್ರದೇಶಗಳಿಗೆ ಹೋಗುತ್ತಿರುವುದು ನಾಟಕ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net