

ವಿಜಯಪುರ: ಮಹಿಳಾ ಸ್ವಸಹಾಯ ಸಂಗಳಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ವಿ.ಪ. ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಗುರುವಾರ 23 ವಿವಿಧ ಮಹಿಳಾ ಸ್ವಸಹಾಯ ಸಂಗಳಿಗೆ ನೋಂದಣಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಸಚಿವ ಎಂ.ಬಿ. ಪಾಟೀಲರು ಮಹಿಳಾ ಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ.
ಹಿಳಾ ಸ್ವಸಹಾಯ ಸಂಗಳ ಉಚಿತ ನೋಂದಣಿಗೆ ನೆರವು ನೀಡಲಾಗಿದೆ. ಅಲ್ಲದೆ, ಬಬಲೇಶ್ವರ ಮತೇತ್ರದ 210 ಮಹಿಳಾ ಸ್ವಸಹಾಯ ಸಂಗಳಿಗೆ ಹೈನುಗಾರಿಕೆ, ಕುರಿ ಸಾಕಣೆ ಸೇರಿ ಗೃಹ ಉದ್ಯೋಗ ಕೈಗೊಳ್ಳಲು ಸರ್ಕಾರದ ಯೋಜನೆಗಳನ್ನು ಒದಗಿಸಲು ಈಗಗಾಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮಹಿಳೆಯ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಿಕೋಟಾ, ಬರಟಗಿ, ಯತ್ನಾಳ, ಯಕ್ಕುಂಡಿ, ಶೇಗುಣಸಿ, ಕಾತ್ರಾಳ, ಕರಾಡದೊಡ್ಡಿ ಸೇರಿ ವಿವಿಧ ಗ್ರಾಮಗಳ 23 ಸ್ವಸಹಾಯ ಸಂಗಳಿಗೆ ನೋಂದಣಿ ಪ್ರಮಾಣ ಪತ್ರವನ್ನು ಸುನೀಲಗೌಡ ಪಾಟೀಲ ವಿತರಿಸಿದರು. ಎಂ.ಸಿ. ತಳವಾರ, ಸಂಗಮೇಶ ಕೋಲಕಾರ ಮತ್ತಿತರರಿದ್ದರು.