ಸಿದ್ಧಿಗಾಗಿ ಹಾಡಿದವರು ಪಂ. ರಾಜಶೇಖರ ಮನಸೂರ

26 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂ. ರಾಜಶೇಖರ ಮನಸೂರ ಪ್ರಸಿದ್ಧಿಗೆ ಹಾಡಿದವರಲ್ಲ. ತಮ್ಮ ಇಡೀ ಜೀವನ ಸಿದ್ಧಿಗಾಗಿ ಸಂಗೀತವನ್ನು ಆರಾಧಿಸಿದವರು. ಅವರು ನಿಷ್ಠುರರಂತೆ ಕಂಡರೂ ಸ್ವಚ್ಛ ಹೃದಯದ ಮನಸ್ಸಿನ ಸ್ವಭಾವದವರಾಗಿದ್ದರು. ಶೈಣಿಕ ೇತ್ರದೊಂದಿಗೆ ಸಂಗೀತ ೇತ್ರದಲ್ಲೂ ಸಾಧನೆ ಮಾಡಿದವರು ಎಂದು ಹಿರಿಯ ಗಾಯಕ ಡಾ. ಎಂ. ವೆಂಕಟೇಶಕುಮಾರ ಹೇಳಿದರು.
ನಗರದ ಆಲೂರು ವೆಂಕಟರಾವ್​ ಸಾಂಸತಿಕ ಭವನದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿಯು ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪಂ.ಮಲ್ಲಿಕಾರ್ಜುನ ಮನಸೂರ ಜೀವನದುದ್ದಕ್ಕೂ ಅವರ ನೆರಳಿನಂತೆ ಬಾಳಿ, ಜೈಪುರ ಅತ್ರೌಲಿ ರಾಣೆಯ ಸಂಗೀತ ಪರಂಪರೆ ಬೆಳೆಸಿದರು ಎಂದರು.
ಡಾ. ಶಾಂತಾರಾಮ ಹೆಗಡೆ ಮಾತನಾಡಿ, ಧಾರವಾಡದ ಸಂಗೀತ ಪರಂಪರೆ ಅವಿಚ್ಛಿನ್ನವಾದುದು. ಅದು ಅತ್ಯಂತ ಶ್ರೇಷ್ಠತೆಯಿಂದ ಮುಂದುವರೆದಿದೆ. ಇಡೀ ದೇಶವೇ ಧಾರವಾಡದತ್ತ ತಿರುಗಿ ನೋಡುವಂತೆ ಮಾಡಿದವರು ಪಂ. ಮಲ್ಲಿಕಾರ್ಜುನ ಮನಸೂರ, ಪಂ. ಬಸವರಾಜ ರಾಜಗುರು, ಪಂ. ಪಂಚಾರಿ ಗವಾಯಿಗಳು, ಪಂ. ಪುಟ್ಟರಾಜ ಗವಾಯಿಗಳು, ಪಂ.ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್​ ಎಂದರು.
ಡಾ.ಜಯದೇವಿ ಜಂಗಮಶೆಟ್ಟಿ, ಯು.ಎಂ.ನಿರಂಜನಮೂತಿರ್ ಮಾತನಾಡಿದರು. ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ಅಧ್ಯ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಪಂ.ರಾಜಶೇಖರ ಮನಸೂರ ಶಿಷ್ಯರಾದ ಡಾ. ಚಂದ್ರಿಕಾ ಕಾಮತ, ಡಾ.ಮೃತ್ಯುಂಜಯ ಅಗಡಿ, ಡಾ.ಮಿಥುನ ಚಕ್ರವತಿರ್, ಡಾ.ಜಯದೇವಿ ಜಂಗಮಶೆಟ್ಟಿ, ಜೆ.ರ್ಪೂವಿ ಗಾಯನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಪಂ.ಅಲ್ಲಮಪ್ರಭು ಕಡಕೋಳ, ಉಸ್ತಾದ ನಿಸ್ಸಾರ ಅಹಮ್ಮದ್​, ಪ್ರಸಾದ ಮಡಿವಾಳರ ಮತ್ತು ಹಾಮೋರ್ನಿಯಂದಲ್ಲಿ ಡಾ.ಪರಶುರಾಮ ಕಟ್ಟಿಸಂಗಾವಿ, ಬಸವರಾಜ ಹಿರೇಮಠ ಸಾಥ್​ ನೀಡಿದರು.
ಡಾ.ಶಿವಾನಂದ ಶೆಟ್ಟರ, ಡಾ. ರಾಜಶೇಖರ ಜಾಡರ, ಅಕ್ಕಮಹಾದೇವಿ ಆಲೂರ, ಜೆ.ನಿರಂಜನ, ಮಹೇಶ ಕಲ್ಲಿಕರೆಣ್ಣವರ, ಶ್ರೀಧರ ಮಾಂಡ್ರೆ, ಡಾ.ಎ.ಎಲ್​.ದೇಸಾಯಿ, ಡಾ. ಮೃತ್ಯುಂಜಯ ಕುರುಬರ, ಡಾ. ಮಂಜುನಾಥ ಭಜಂತ್ರಿ, ಡಾ. ಅರ್ಜುನ ವಠಾರ, ಡಾ. ಗೋಪಿಕೃಷ್ಣ, ಬಸವರಾಜ ಹೂಗಾರ, ಗಂಗಾಧರ ಗಂಗಾಳದ, ಮಲ್ಲೇಶ ಹೂಗಾರ, ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾಥಿರ್ಗಳು ಭಾಗವಹಿಸಿದ್ದರು.
ಸುಜಾತಾ ಗುರವ ಸ್ವಾಗತಿಸಿದರು. ರವಿ ಕುಲಕಣಿರ್ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net