ಯಕೃತ್ತು ಆರೋಗ್ಯದ ಕಾಳಜಿ ವಹಿಸಿ

Sandur Helath
ತೋರಣಗಲ್ ಸಿಎಚ್‌ಸಿ ಮುಂದೆ ಹೈಪಟೈಟಿಸ್ ಕಾಯಿಲೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಡಾ.ಗೋಪಾಲರಾವ್, ಡಾ.ರಜಿಯಾ ಬೇಗಂ, ಡಾ.ಅನುಷಾ, ಅಧೀಕ್ಷಕ ಹರ್ಷ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಇತರರಿದ್ದರು.
Published on

ಸಂಡೂರು: ಯಕೃತ್ತಿನ ಆರೋಗ್ಯಕ್ಕೆ ಶುದ್ಧ ಕುಡಿವ ನೀರು, ಸರಳವಾದ ಆಹಾರ ಸೇವನೆ ಮುಖ್ಯ ಎಂದು ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಹೇಳಿದರು.
ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಹೆಪಟೈಟಿಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಸಿವು ಆಗದಿರುವುದು, ಹೊಟ್ಟೆಯ ಬಲಭಾಗ ನೋವು, ಸುಸ್ತು, ಆಯಾಸ, ವಾಕರಿಕೆ, ವಾಂತಿ, ಕಣ್ಣು-ಉಗುರು, ಮೂತ್ರ ಹಳದಿಯಾಗುವುದು ರೋಗದ ಲಕ್ಷಣಗಳಾಗಿದ್ದು, ಹೆಪಟೈಟಿಸ್ ಎಬಿಸಿಡಿ ಮತ್ತು ಇ ಐದು ವೈರಸ್‌ಗಳು ಕಾಯಿಲೆ ತರುತ್ತವೆ. ಇವು ಆರೋಗ್ಯ ಹದಗೆಡಿಸುತ್ತವೆ.

ಪರಸ್ಪರ ರೋಗ ಹರಡದಿರಲು ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು. ಸಂಸ್ಕರಿಸದ ಸೂಜಿ, ಸಿರೆಂಜ್ ಬಳಸುವುದರಿಂದ ಕಾಯಿಲೆ ಹರಡುತ್ತದೆ. ಹೆಪಟೈಟಿಸ್ ಬಿ ಲಸಿಕೆ ಲಭ್ಯವಿದ್ದು, ಮಕ್ಕಳಿಗೆ ತಪ್ಪದೆ ಕೊಡಿಸಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಆರೋಗ್ಯಕ್ಕಾಗಿ ಸೊಪ್ಪು, ಕಾಳು, ತರಕಾರಿಯುಕ್ತ ಉತ್ತಮ ಆಹಾರ, ಶುದ್ಧ ನೀರು ಸೇವನೆ ಮಾಡಬೇಕು ಎಂದು ತಿಳಿಸಿದರು. ಸ್ತ್ರೀರೋಗ ತಜ್ಞೆ ಡಾ.ರಜಿಯಾ ಬೇಗಂ, ಡಾ.ಅನುಷಾ, ಅಧೀಕ್ಷಕ ಹಷರ್, ಮಂಜುನಾಥ್, ಲಕ್ಷ್ಮೀ, ರೂಪಾ, ಗೀತಾ, ಇಮ್ರಾನ್, ಸಂಗೀತಾ, ಭಾಸ್ಕರ್, ಮಾರೇಶ, ಶಿವಕುಮಾರ್, ರತ್ನಮ್ಮ, ಮಾಬುಸಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net