ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಿ

SANDUR Health
ವಿಶ್ವ ಹೃದಯ ದಿನಾಚರಣೆ ನಿಮಿತ್ತ ತಾಳೂರು ಗ್ರಾಮದಲ್ಲಿ ಶುಕ್ರವಾರ ಜಾಗೃತಿ ಕಾರ್ಯಕ್ರಮ ನಡೆಯಿತು. ತಾಪಂ ಮಾಜಿ ಸದಸ್ಯ ಮೇಘನಾಥ, ಬಿಎಚ್‌ಇಒ ಶಿವಪ್ಪ, ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ಮಂಗಳಾ ಇತರರಿದ್ದರು.
Published on

ಸಂಡೂರು: ಹೃದಯದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿವಹಿಸಬೇಕು ಎಂದು ತಾಪಂ ಮಾಜಿ ಸದಸ್ಯ ಮೇಘನಾಥ್ ಹೇಳಿದರು.

ವಿಶ್ವ ಹೃದಯ ದಿನಾಚರಣೆ ನಿಮಿತ್ತ ತಾಳೂರು ಗ್ರಾಮದ ಕಲ್ಲೇಶ್ವರ ದೇವಾಲಯದ ಪಾರ್ಕ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಬದಲಾಗುತ್ತಿರುವ ಜೀವನ ಶೈಲಿಯಿಂದ ಹೃದಯಕ್ಕೆ ಹಾನಿಯಾಗುತ್ತಿದೆ. ಉತ್ತಮ ಜೀವನ ಶೈಲಿಯಲ್ಲಿ ಹೃದಯದ ಆರೋಗ್ಯ ಅಡಗಿದೆ. ಹೆಚ್ಚು ಕೊಬ್ಬಿನಾಂಶ ಹೊಂದಿರುವ ಆಹಾರ, ಅತಿ ಉಪ್ಪು, ಖಾರಾ, ಮಸಾಲೆ ಪದಾರ್ಥಗಳ ಬಳಕೆ ಒಳ್ಳೆಯದಲ್ಲ. ಕಾಳು, ಸೊಪ್ಪು, ತರಕಾರಿ ಇರುವ ಆಹಾರ, ಹಣ್ಣುಗಳ ಸೇವಿಸಬೇಕು. ಯೋಗ, ಧ್ಯಾನ, ವ್ಯಾಯಾಮ ಮೈಗೂಡಿಸಿಕೊಳ್ಳಬೇಕು ಎಂದು ತಿಳಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಯುವಕರು ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರಬೇಕು. ಆರು ತಿಂಗಳಿಗೊಮ್ಮೆ ಹೃದಯದ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದರು. ಪ್ರಮುಖರಾದ ಮಂಜುನಾಥ ಸ್ವಾಮಿ, ಬಸವರಾಜ, ರವಿಕುಮಾರ್, ಜಯರಾಮ, ನಾಗರಾಜ, ಹಂಪಮ್ಮ, ಗಂಗಮ್ಮ, ನೀಲಮ್ಮ, ಈರಮ್ಮ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಕಾರ್ಯಕರ್ತೆ ಮಂಗಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net