

ಸಂಡೂರು: ಯಾವುದೇ ಅಧಿಕಾರ ಶಾಶ್ವತವಲ್ಲ. ವ್ಯಕ್ತಿತ್ವ ಮತ್ತು ಸತ್ಸಂಬಂಧಗಳು ಮುಖ್ಯ ಎಂದು ಸಂಸದ ಈ.ತುಕಾರಾಮ್ ಹೇಳಿದರು.
ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಸ್ಕಂದಗಿರಿ ಸಭಾಂಗಣದಲ್ಲಿ ಕಸಾಪದಿಂದ ‘ಕರುನಾಳು ಬೆಳಕು-ಡಾ.ಬಿ.ಅಂಬಣ್ಣ-88’ ಅಭಿನಂದನಾ ಗ್ರಂಥವನ್ನು ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಮಾನವನ ಜೀವನದಲ್ಲಿ ಸಾಹಿತ್ಯ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ನಿರಂತರ ಅಧ್ಯಯನದ ಮೂಲಕ ಮನುಷ್ಯ ತನ್ನ ಜೀವನವನ್ನು ಉನ್ನತಿಯ ಕಡೆಗೆ ಕೊಂಡೊಯ್ಯಬಹುದಾಗಿದೆ ಎಂದರು. ಕನ್ನಡ ವಿವಿ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಕೃತಿಯ ಪರಿಚಯ ಮಾಡಿಕೊಟ್ಟರು. ತಾಲೂಕು ಕಸಾಪ ಅಧ್ಯಕ್ಷ ಬಿ.ನಾಗನಗೌಡ, ಮ.ಬ.ಸೋಮಣ್ಣ ಮಾತನಾಡಿದರು.
ಕೃತಿಯ ಸಂಪಾದಕ ಹಾಗೂ ಪಿಜಿ ಕೇಂದ್ರದ ನಿರ್ದೇಶಕ ಡಾ.ಬಿ.ರವಿ, ಡಾ.ಮಲ್ಲಯ್ಯ, ಹಬೊಹಳ್ಳಿ ಸರ್ಕಾರಿ ಪ್ರದ ಕಾಲೇಜಿನ ಪ್ರಾಚಾರ್ಯ ಡಾ.ವೆಂಕಟೇಶ್, ಹೊಸಪೇಟೆ ರಂಗಕರ್ಮಿ ಮ.ಬ.ಸೋಮಣ್ಣ, ಮರಿಯಮ್ಮಹಳ್ಳಿ ಡಾ.ಬಿ.ಅಂಬಣ್ಣ, ಅನ್ನಪೂರ್ಣ ತುಕಾರಾಮ್, ಕ್ರೀಡಾ ಸಹಾಯಕ ಪಾಪಯ್ಯ ಇತರರಿದ್ದರು.