ಜಿಲ್ಲಾ ಉಪಾಧ್ಯಕ್ಷರಾಗಿ ಸುಂದ್ರೇಗೌಡ ನೇಮಕ

09BTP02
Published on

ಬೆಟ್ಟದಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೈಸೂರು ಜಿಲ್ಲಾ ಉಪಾಧ್ಯಕ್ಷರಾಗಿ ಸುಂದ್ರೇಗೌಡ ಚನ್ನಕೇಶವಪುರ ನೇಮಕಗೊಂಡಿದ್ದಾರೆ.

ಇತ್ತಿಚೇಗೆ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಅವರು ನೇಮಕ ಪತ್ರವನ್ನು ವಿತರಿಸಿದ್ದಾರೆ. ಸುಂದ್ರೇಗೌಡ ಅವರು ಈ ಮೊದಲು ತಾಲೂಕು ಅಧ್ಯಕ್ಷರಾಗಿ ರೈತರ ಪರ ಧ್ವನಿಯಾಗಿ ಸೇವೆ ಸಲ್ಲಿಸಿದರು. ಸೇನೆಯಲ್ಲಿ ಗುರುತಿಸಿಕೊಂಡ ಇವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಿಸಿದ್ದಾರೆ.

ನೂತನ ಜಿಲ್ಲಾ ಉಪಾಧ್ಯಕ್ಷ ಸುಂದ್ರೇಗೌಡ ಮಾತನಾಡಿ, ಸರ್ಕಾರದಿಂದ ರೈತರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ರೈತರು ಬೆಳೆದ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ನನ್ನ ಅಧಿಕಾರದ ಅವಧಿಯಲ್ಲಿ ಸದಾ ರೈತರ ಪರ ದುಡಿಯುವ ಮೂಲಕ ಸೇವೆ ಸಲ್ಲಿಸಿ ಅವರ ಧ್ವನಿಯಾಗಿರುತ್ತೇನೆ ಎಂದರು.

ಉಪಾಧ್ಯಕ್ಷ ಡಾ.ಗುರುಪ್ರಸಾದ್, ಮಹಿಳಾ ಉಪಾಧ್ಯಕ್ಷೆ ಅನ್ನಪೂರ್ಣ, ಗೌರವ ಅಧ್ಯಕ್ಷ ಮೋಹನ್ ರಾಜ್, ಜಿಲ್ಲಾಧ್ಯಕ್ಷ ಲೋಕೇಶ್, ತಾಲೂಕು ಗೌರವ ಅಧ್ಯಕ್ಷ ದಿನೇಶ್ ಬಸವನಹಳ್ಳಿ, ತಾಲೂಕು ಅಧ್ಯಕ್ಷ ಕಣಗಾಲ್ ಕೆ.ಮಹದೇವ್, ಉಪಾಧ್ಯಕ್ಷ ಶಿವರಾಜು, ಮೈಸೂರು ಕೊಡಗು ಜಿಲ್ಲಾ ಸಂಚಾಲಕ ಡಾ.ಅರುಣ್ ಕುಮಾರ್, ಸಲಹೆಗಾರ ಅಡಗೂರು ಜಯಣ್ಣ, ಪದಾಧಿಕಾರಿಗಳಾದ ಗೋವಿಂದ್, ಕುಬೇರ್, ಮಾದೇಗೌಡ, ಗಾಂಧಿ, ಶರತ್ ಕುಮಾರ್, ಚಂದ್ರಣ್ಣ, ಪ್ರಸನ್ನ ರೆಡ್ಡಿ, ರಾವಂದೂರು ಅಭಿಲಾಷ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net