ಅಮರಗೋಳದಲ್ಲಿ ಭಾನುವಾರ ಸಂತೆ

IMG-20250325-WA0012-1_1-2.jpg
Published on

ಹುಬ್ಬಳ್ಳಿ: ತಾಲೂಕಿನ ಅಮರಗೋಳ ಹಾಗೂ ಸುತ್ತಮುತ್ತಲಿನ ಬಡಾವಣೆಯ ಜನರ ಅನುಕೂಲಕ್ಕಾಗಿ ಗ್ರಾಮದ ಸ್ಟೇಶನ್ ರಸ್ತೆ ಅರಳಿ ಗಿಡದ ಹತ್ತಿರ ಭಾನುವಾರ ಸಂತೆ ಪ್ರಾರಂಭಿಸಲಾಗುತ್ತಿದೆ.

ಯುಗಾದಿ ಸಂಭ್ರಮದ ಜತೆಗೆ ಮಾ. 30ರಂದು ಬೆಳಗ್ಗೆ 10ಕ್ಕೆ ಸಂತೆ ಉದ್ಘಾಟನೆ ನಡೆಯಲಿದೆ.

ಅಮರಗೋಳ, ಕೆ ಎಚ್ ಬಿ 2ನೇ ಹಂತ, ಜಡ್ಜ್ ಕ್ವಾಟರ್ಸ್, ಗಾಂಧಿನಗರ ಹಾಗೂ ಸುತ್ತಮುತ್ತಲಿನ ಜನರು ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಇಲ್ಲೊಂದು ಸಂತೆ ನಡೆಸುವುದು ತುಂಬಾ ಅಗತ್ಯ ಇದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು, ಸಂತೆಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮಹಾನಗರ ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ ಅವರಿಗೆ ಗ್ರಾಮದ ಹಿರಿಯರು ಮನವಿ ಸಲ್ಲಿಸಿದ್ದಾರೆ.

ಇಲ್ಲಿ ಹಣ್ಣು - ತರಕಾರಿ, ದಿನಬಳಕೆಯ ವಸ್ತುಗಳ ಮಾರಾಟ ನಡೆಯಲಿದೆ. ಸುತ್ತಮುತ್ತಲಿನ ಜನರು ಇದರ ಪ್ರಯೋಜನ ಪಡೆಯಬೇಕೆಂದು ಸಂತೆ ಸಂಘಟಕರ ಪರವಾಗಿ ಷಣ್ಮುಖ ಬೆಟಗೇರಿ, ಮಂಜುನಾಥ ಲದ್ದಿ ಅವರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net