ಸಂಡೇ ಲಾಕ್‌ಡೌನ್ ತೆರವು ಬಳಿಕ ಕಮಲಾಪುರ ಜೈವಿಕ ಉದ್ಯಾನದಲ್ಲಿ ಭಾನುವಾರವೂ ಹುಲಿ ಸಫಾರಿಗೆ ಅವಕಾಶ

Hampi Zoo Atal bihari Vajapai park Yiger Lion Safari
ಕಮಲಾಪುರ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ.
Published on

ಹೊಸಪೇಟೆ: ಸರ್ಕಾರ ಭಾನುವಾರದ ಲಾಕ್‌ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಕಮಲಾಪುರ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ಆ.2 ರಿಂದ ಹುಲಿ ಸಫಾರಿ, ಮೃಗಾಲಯ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಕರೊನಾ ಹರಡುವಿಕೆ ತಡೆಗಾಗಿ ಭಾನುವಾರವೂ ಲಾಕ್‌ಡೌನ್ ಘೋಷಿಸಿದ್ದರಿಂದ ಪ್ರವೇಶ ನಿಷೇಧಿಸಲಾಗಿತ್ತು. ಈಗ ಸಂಡೇ ಲಾಕ್‌ಡೌನ್ ತೆರವುಗೊಳಿಸಿದ್ದರಿಂದ ಮಂಗಳವಾರ ರಜಾ ದಿನ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಉದ್ಯಾನ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ ಎಂದು ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ.ಕಿರಣ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net