ಮುಂದಿನ ಭಾನುವಾರದಿಂದ ವೀಕೆಂಡ್​ ಲಾಕ್​ಡೌನ್​ ಇರುವುದಿಲ್ಲ?

Lockdown
Published on

ಬೆಂಗಳೂರು: ಕರೊನಾ ವೈರಸ್​ ಕಟ್ಟಿಹಾಕಲು ವೀಕೆಂಡ್​ ಲಾಕ್​ಡೌನ್​ ಹೇರಿರುವ ಸರ್ಕಾರ ಮುಂದಿನ ಭಾನುವಾರದಿಂದ ಲಾಕ್​ಡೌನ್​ ತೆರವುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತದೆ.

ಲಾಕ್​ಡೌನ್​ ಬೇಡವೇ ಬೇಡ ಎಂದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ. ಹೀಗಾಗಿ ಇದೇ ಭಾನುವಾರ ಲಾಕ್​ಡೌನ್​ ಕೊನೆಯಾಗಲಿದೆ. ಮುಂದಿನ ಭಾನುವಾರದಿಂದ ಜನರು ಸ್ವತಂತ್ರವಾಗಿ ಓಡಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕಾಗಿ ಅನೇಕ ಸಚಿವರು ಸಿಎಂ ಬಿಎಸ್​ ಯಡಿಯೂರಪ್ಪ ಬಳಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ನಿವಾಸ ಕಾವೇರಿಯಲ್ಲಿ ಲಾಕ್ಡೌನ್ ತೆಗೆಯುವ ಬಗ್ಗೆ ಚರ್ಚೆ ಆಗಿದೆ ಎನ್ನಲಾಗಿದೆ. ಭಾನುವಾರ ಲಾಕ್ಡೌನ್ ಬೇಡವೆಂದು ಸಚಿವರು ಸಲಹೆ ನೀಡಿದ್ದು, ಅಂತಿಮ ನಿರ್ಧಾರವನ್ನು ಸಿಎಂಗೆ ಬಿಟ್ಟಿದ್ದಾರೆ. ಇದೀಗ ಸಿಎಂ ಅಂಗಳದಲ್ಲಿ ಸಂಡೆ ಲಾಕ್ಡೌನ್ ಬಾಲ್? ಇದೆ ಎಂಬುದು ರಾಜಕೀಯ ಮೂಲಗಳ ಮಾತಾಗಿದೆ.

ವೀಕೆಂಡ್​ನಲ್ಲಿ ಮೋಜು-ಮಸ್ತಿ ಎಂದು ಸಾಕಷ್ಟು ಜನರು ಒಂದೆಡೆ ಸೇರುತ್ತಾರೆ ಎಂಬ ಆತಂಕದಿಂದ ಭಾನುವಾರ ಸಂಪೂರ್ಣ ಲಾಕ್​ಡೌನ್​ಗೆ ಒತ್ತು ನೀಡಲಾಗಿತ್ತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net