

ಸಿರವಾರ: ಜಿಲ್ಲಾಸ್ಪತ್ರೆಗೆ ಸೇರಿಸಲೆಂದು ಗರ್ಭಿಣಿಯನ್ನು 108 ಆಂಬುಲೆನ್ಸ್‌ನಲ್ಲಿ ಶನಿವಾರ ಸಂಜೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಹರಿಗೆಯಾಗಿದ್ದು, ಅವಳಿ ಹೆಣ್ಣು ಮಕ್ಕಳ ಜನಿಸಿದ್ದಾರೆ.
ತಾಲೂಕಿನ ಗಣದಿನ್ನಿ ಗ್ರಾಮದ ಹನುಮಂತಿ ಅಂಜನೇಯ ಅವಳಿ ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದು, ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ. ರಿಮ್ಸ್‌ಗೆ ಸೇರಿಲು ಹನುಮಂತಿಯನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿರುವಾಗ ಹೆರಿಗೆ ನೋವು ಹೆಚ್ಚಾಯಿತು. ಇದರಿಂದ ಆಂಬುಲೆನ್ಸ್ ಶುಶ್ರೂಷಕಿ ಲಕ್ಷ್ಮಿ ಹೆರಿಗೆ ಮಾಡಿಸಿದ್ದಾರೆ. ಚಾಲಕ ಶಶಿಕಾಂತ ಸಹಕರಿಸಿದ್ದಾರೆ. ಈಗ ತಾಯಿ, ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.