ಮೈಸೂರು ನೂತನ ಡಿಸಿಪಿಯಾಗಿ ಸುಂದರ್‌ರಾಜ್ ಅಧಿಕಾರ ಸ್ವೀಕಾರ

Sundarraj assumes office as new DCP of Mysore
Published on

ಮೈಸೂರು: ಮೈಸೂರು ನಗರ ಪೊಲೀಸ್ ಅಪರಾಧ ಮತ್ತು ಸಂಚಾರ ವಿಭಾಗದ ನೂತನ ಡಿಸಿಪಿಯಾಗಿ ಸುಂದರ್ ರಾಜ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಇದುವರೆಗೆ ಡಿಸಿಪಿಯಾಗಿದ್ದ ಎಸ್. ಜಾಹ್ನವಿ ಅವರನ್ನು ಸ್ಥಳ ನಿಯೋಜಿಸದೆ ವರ್ಗಾಯಿಸಲಾಗಿದೆ. ಕೊಡಗು ಜಿಲ್ಲೆಯ ಹೆಚ್ಚುವರಿ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಂದರ್ ರಾಜ್ ಅವರನ್ನು ಡಿಸಿಪಿಯನ್ನಾಗಿ ನಿಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಗುರುವಾರ ಆಗಮಿಸಿದ ಸುಂದರ್ ರಾಜ್ ಅವರು, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರನ್ನು ಭೇಟಿಯಾದ ಬಳಿಕ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡರು. ಸುಂದರ್ ರಾಜ್ ಈ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ಡಿವೈಎಸ್ಪಿಯಾಗಿ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇನ್ಸ್‌ಪೆಕ್ಟರ್‌ಆಗಿ ಕಾರ್ಯ ನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net