ಸೂನಗಹಳ್ಳಿಯಲ್ಲಿ ಶೂನ್ಯ ನೆರಳಿನ ದಿನಾಚರಣೆ: ವಿಜ್ಞಾನ ಶಿಕ್ಷಣ ಮತ್ತು ಪರಿಸರ ಅಕಾಡೆಮಿಯಿಂದ ಆಯೋಜನೆ

1 (2)
Published on

ಮಂಡ್ಯ: ತಾಲೂಕಿನ ಸೂನಗಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಣ ಮತ್ತು ಪರಿಸರ ಅಕಾಡೆಮಿ ವತಿಯಿಂದ ಶೂನ್ಯ ನೆರಳಿನ ದಿನವನ್ನು ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಎಸ್.ಲೋಕೇಶ್, ಸ್ಲೈಡ್ಸ್‌ಗಳ ಮೂಲಕ ಖಗೋಳ ವಿದ್ಯಮಾನಗಳ ಪ್ರಕ್ರಿಯೆಗಳನ್ನು ವಿವರಿಸಿದರು. ಭೂಮಿಯ ಮೇಲಿನ ಆಯಾ ಅಕ್ಷಾಂಶಗಳ ಆಧಾರಿತವಾಗಿ ಕರ್ಕಾಟಕ ಸಂಕ್ರಾಂತಿ ವೃತ್ತದ ಕಡೆಗೆ ಸೂರ್ಯ ಸಾಗುವ ಎರಡು ಸಂದರ್ಭಗಳಲ್ಲಿ ಶೂನ್ಯ ನೆರಳಿನ ಘಟನೆ ನಡೆಯುತ್ತದೆ. ಏ.25ರಂದು ಉತ್ತರದ ಕಡೆ ಸಾಗುವಾಗ ಹಾಗೂ ಆ.18ರಂದು ದಕ್ಷಿಣದ ಕಡೆಗೆ ಸಾಗುವಾಗ ಈ ಘಟನೆ ನಡೆಯುತ್ತದೆ. ಶಾಲಾ ಅಂಗಳದಲ್ಲಿ ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ ಅನೇಕ ಉಪಕರಣಗಳನ್ನು ನೇರ ಹಾಗೂ ಬುಡ ಮೇಲಾಗಿರಿಸಿ ಶೂನ್ಯ ನೆರಳು ಉಂಟಾಗುವ ಸಾಧ್ಯತೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅಕಾಡೆಮಿ ಅಧ್ಯಕ್ಷ ಜಯರಾಮು ಮಾತನಾಡಿದರು. ಮುಖ್ಯ ಶಿಕ್ಷಕ ಪುಟ್ಟರಾಮರಾಜೇ ಅರಸು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net